ಮ್ಯೂಸಿಕ್ ಕೇಳುತ್ತಾ ನಿದ್ರಿಸುತ್ತೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಬುಧವಾರ, 5 ಡಿಸೆಂಬರ್ 2018 (09:25 IST)
ಬೆಂಗಳೂರು: ರಾತ್ರಿ ಮಲಗುವಾಗ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಮೆಲುವಾದ ಸಂಗೀತ ಕೇಳುತ್ತಾ ನಿದ್ರಿಸುವ ಅಭ್ಯಾಸವಿದೆಯೇ? ಹಾಗಿದ್ದರೆ ಇದು ನಮ್ಮ ದೇಹದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ನೋಡಿ.


ಸಾಮಾನ್ಯವಾಗಿ ಸಂಗೀತ ಆಲಿಸುವುದು ಉತ್ತಮ ಹವ್ಯಾಸವೆಂದೇ ನಾವು ಅಂದುಕೊಂಡಿದ್ದೇವೆ. ಆದರೆ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ನಿದ್ರಿಸುವುದು ಖಂಡಿತಾ ಆರೋಗ್ಯಕರ ಲಕ್ಷಣವಲ್ಲ.

ನಮ್ಮ ದೇಹ ಸಹಜವಾಗಿಯೇ ನಿದ್ರೆಯ ಲೋಕಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಿಕೊಂಡಿರುತ್ತದೆ. ನಿದ್ರೆ ಬರುತ್ತಿಲ್ಲವೆಂದು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಸಂಗೀತ ಕೇಳುವುದರಿಂದ ಕೃತಕ ವ್ಯವಸ್ಥೆಯೊಂದಕ್ಕೆ ದೇಹವನ್ನು ಹೊಂದಿಸಿಕೊಂಡಂತಾಗುತ್ತದೆ. ಅಷ್ಟೇ ಅಲ್ಲದೆ, ಸಂಗೀತ ಕೇಳುವಾಗ ನಮ್ಮ ಮೆದುಳು ಜಾಗೃತವಾಗಿಯೇ ಇರುತ್ತದೆ. ಇದರಿಂದ ಮೆದುಳಿಗೂ ವಿಶ್ರಾಂತಿ ಇಲ್ಲದಾಗುತ್ತದೆ. ಹೀಗಾಗಿ ಮಲಗುವಾಗ ಕಿವಿಗೆ ಇಯರ್ ಫೋನ್ ಹಾಕಿಕೊಂಡು ಸಂಗೀತ ಕೇಳುವುದನ್ನು ಕಡಿಮೆ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ