ಮಧುಮೇಹಿಗಳು ಎಳೆನೀರು ಸೇವಿಸಬಹುದೇ?

ಶನಿವಾರ, 13 ಅಕ್ಟೋಬರ್ 2018 (09:25 IST)
ಬೆಂಗಳೂರು: ಎಳೆನೀರು ನೈಸರ್ಗಿಕವಾಗಿ ಸಿಹಿಯಾಗಿರುವ ಪಾನೀಯ. ಹಾಗಾಗಿ ಇದನ್ನು ಮಧುಮೇಹಿಗಳು ಸೇವಿಸಬಹುದೇ ಎಂಬ ಸಂಶಯ ಎಲ್ಲರಲ್ಲಿ ಮೂಡುತ್ತದೆ.

ಆದರೆ ಎಳೆನೀರು ನೈಸರ್ಗಿಕ ಸಿಹಿಯನ್ನು ಹೊಂದಿದ್ದು, ಇದನ್ನು ಮಧುಮೇಹಿಗಳು ಸೇವಿಸಬಾರದು ಎಂದಿಲ್ಲ. ಇದರಲ್ಲಿರುವ ಪೋಷಕಾಂಶಗಳು ಮಧುಮೇಹಿಗಳಿಗೆ ಉತ್ತಮ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ.

ಎಳೆನೀರಿನಲ್ಲಿ ಸಂಸ್ಕರಿತ ಸಕ್ಕರೆ ಅಂಶದ ಗುಣವಿಲ್ಲದೇ ಇರುವುದರಿಂದ ಇದು ರಕ್ತದಲ್ಲಿ ಸಿಹಿ ಅಂಶ ಹೆಚ್ಚಿಸದು. ಅಲ್ಲದೆ ಇದರಲ್ಲಿರುವ ಪೊಟೇಷಿಯಂ ಅಂಶ ಮಧುಮೇಹಿಗಳು ಸೇರಿದಂತೆ ಎಲ್ಲರ ಮೂತ್ರಜನಕಾಂಗದ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ