ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿ ಹೊಂದಲು ಇದನ್ನು ತಿನ್ನಿ

ಗುರುವಾರ, 7 ನವೆಂಬರ್ 2019 (09:49 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೆಲವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ನಮ್ಮ ಆಹಾರ, ಜೀವನಶೈಲಿ, ಒತ್ತಡ, ಚಿಂತೆ ಈ ಸಮಸ್ಯೆಗೆ ಕಾರಣವಾಗಿದೆ. ಹಾಗೇ ದೇಹದಲ್ಲಿರುವ ಕ್ಯಾಲ್ಸಿಯಂ, ಐಯೋಡಿನ್ ಕೊರತೆಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ.



ಅಣಬೆ ಥೈರಾಯ್ಡ್ ಸಮಸ್ಯೆ ನಿಯಂತ್ರಿಸಲು ಸಹಕಾರಿಯಾಗಿದೆ. ಇತ್ತೀಚಿನ ಸಂಶೋಧನೆವೊಂದರ ಪ್ರಕಾರ ಥೈರಾಯ್ಡ್ ಗೆ ಶರೀರದಲ್ಲಿ ಸೆಲೆನಿಯಂ ಕಡಿಮೆಯಾಗುವುದು ಒಂದು ಕಾರಣವಾಗಿದೆಯಂತೆ. ಅಣಬೆಯಲ್ಲಿ ಸೆಲೆನಿಯಂ ಅಂಶ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚಾಗಿ ಬಳಸಿದರೆ ಥೈರಾಯ್ಡ್ ಸಮಸ್ಯೆಯನ್ನು  ನಿಯಂತ್ರಿಸಬಹುದು.

 

ಹಾಗೇ ಬೆಳ್ಳುಳ್ಳಿಯಲ್ಲಿಯೂ ಸೆಲೆನಿಯಂ ಅಂಶ ಹೆಚ್ಚಾಗಿರುವುದರಿಂದ ಇದನ್ನು ಹೆಚ್ಚಾಗಿ ಬಳಸಿದರೆ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆಯಂತೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ