ಮಳೆಗಾಲದಲ್ಲಿ ಕಾಲಿನಲ್ಲಾಗುವ ನಂಜಿನ ಗಾಯಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಸೋಮವಾರ, 20 ಜುಲೈ 2020 (12:38 IST)
ಬೆಂಗಳೂರು : ಮಳೆಗಾಲದಲ್ಲಿ ಹೆಚ್ಚಾಗಿ ಹೊರಗಡೆ ಓಡಾಡುವುದರಿಂದ ಕಾಲುಗಳಲ್ಲಿ ನಂಜಿನ ಗಾಯಗಳಾಗುತ್ತದೆ. ಇದು ತುಂಬಾ ತುರಿಕೆಯಿಂದ ಕೂಡಿರುತ್ತದೆ. ಅದಕ್ಕೆ ಈ ಸಣ್ಣ ಟಿಪ್ ಫಾಲೋ ಮಾಡಿ.
ರಾತ್ರಿ ಮಲಗುವ ಮುಂಚೆ ಒಂದು ಬಟ್ಟಲಿನಲ್ಲಿ ಹದ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರಶಿನ ಮತ್ತು ನಿಂಬೆ ಹಣ್ಣಿನ ರಸ ಹಾಕಿ ಕಾಲುಗಳನ್ನು ಅದರಲ್ಲಿ 15 ನಿಮಿಷ ಇಟ್ಟುಕೊಳ್ಳಿ. ಇದರಿಂದ ಕಾಲಿನಲ್ಲಾದ ಗಾಯಗಳು ಬೇಗ ವಾಸಿಯಾಗುತ್ತದೆ ಅಲ್ಲದೇ ತುರಿಕೆಗಳು ಕಡಿಮೆಯಾಗುತ್ತದೆ.