Red Banana: ಖಿನ್ನತೆ ಇರುವವರು ಕೆಂಪು ಬಾಳೆ ಹಣ್ಣು ಸೇವಿಸಿ ನೋಡಿ

Krishnaveni K

ಗುರುವಾರ, 22 ಫೆಬ್ರವರಿ 2024 (10:20 IST)
File photo
ಬೆಂಗಳೂರು: ಸಾಮಾನ್ಯವಾಗಿ ನಾವು ಬಾಳೆ ಹಣ್ಣು ಎಂದ ತಕ್ಷಣ ಏಲಕ್ಕಿ, ಪಚ್ಚೆ ಬಾಳೆ ಹಣ‍್ಣು ಅಥವಾ ಕೇರಳ ಬಾಳೆ ಹಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ಎಲ್ಲಕ್ಕಿಂತ ಹೆಚ್ಚು ಕೆಂಪು ಬಾಳೆ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶವಿರುತ್ತದೆ.

ಕೆಂಪು ಬಾಳೆ ಹಣ್ಣಿನಲ್ಲಿ ವಿಟಮಿನ್ ಬಿ6 ಹೇರಳವಾಗಿದೆ. ಇದು ನಿಮಗೆ ಅನೇಕ ಆರೋಗ್ಯಕರ ಉಪಯೋಗಗಳನ್ನು ನೀಡುತ್ತದೆ. ಹೊರಗಿನಿಂದ ಸಿಪ್ಪೆ ಕೆಂಪಗಾಗಿದ್ದರೂ ಒಳಗಿನ ತಿರುಳಿನ ರುಚಿ ಇತರೆ ಬಾಳೆ ಹಣ್ಣಿನಂತೇ ಇರುತ್ತದೆ. ಇದು ಮಧುಮೇಹಿಗಳಿಗೆ, ಪುರುಷರಲ್ಲಿ ಬಂಜೆತನ ನಿವಾರಣೆ ಅತ್ಯುತ್ತಮವಾಗಿದೆ. ಇದರಲ್ಲಿ ಕ್ಯಾಲ್ಶಿಯಂ ಅಂಶವೂ ಹೇರಳವಾಗಿದ್ದು, ಎಲುಬಿನ ಸಂರಕ್ಷಣೆಗೂ ಅತ್ಯುತ್ತಮವಾಗಿದೆ. ಅಲ್ಲದೆ ನಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ರಕ್ತ ಶುದ್ಧೀಕರಣ ಮಾಡುವ ಗುಣವನ್ನೂ ಹೊಂದಿರುತ್ತದೆ.

ಖಿನ್ನತೆ ದೂರ ಮಾಡುತ್ತದೆ
ಕೆಂಪು ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6 ಅಂಶ ಹಾರ್ಮೋನ್ ಒಂದನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ನಮ್ಮ ಮನಸ್ಸನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲುತ್ತಿರುವವರು ತಪ್ಪದೇ ಕೆಂಪು ಬಾಳೆ ಹಣ್ಣು ಸೇವಿಸಬೇಕು.

ಅಷ್ಟೇ ಅಲ್ಲದೆ, ಹೃದಯದ ಆರೋಗ್ಯಕ್ಕೂ ಕೆಂಪು ಬಾಳೆ ಹಣ್ಣು ಉತ್ತಮ. ಅಲ್ಲದೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯ ಕೆಂಪು ಬಾಳೆಹಣ್ಣಿಗಿದೆ. ಇದರಲ್ಲಿ ನೈಸರ್ಗಿಕ ಸಕ್ಕರೆಯಿದ್ದು, ಮಧುಮೇಹಿಗಳೂ ಯಾವುದೇ ಭಯವಿಲ್ಲದೇ ಸೇವಿಸಬಹುದಾಗಿದೆ. ಒಟ್ಟಾರೆಯಾಗಿ ನಮ್ಮ ದೇಹದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ನೀಡುವ ಸಾಮರ್ಥ್ಯ ಹೊಂದಿರುವ ಪೌಷ್ಠಿಕ ಹಣ್ಣು ಇದಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ