ಕೂದಲಿನ ಸಮಸ್ಯೆ ನಿವಾರಿಸಿಕೊಳ್ಳು ಇಲ್ಲಿದೆ ನೋಡಿ ಸೂಪರ್ ಟಿಪ್ಸ್!
ಶುಕ್ರವಾರ, 12 ಫೆಬ್ರವರಿ 2021 (06:51 IST)
ಬೆಂಗಳೂರು : ಹಸಿರು ಬಟಾಣಿಯನ್ನು ಅಡುಗೆಗ ಬಳಸುತ್ತಾರೆ. ಇದು ಅಡುಗೆಯನ್ನು ರುಚಿಕರವಾಗಿಸುತ್ತದೆ. ಈ ಹಸಿರು ಬಟಾಣಿಯಿಂದ ಕೂದಲಿನ ಸಮಸ್ಯೆಗಳನ್ನು ಕೂಡ ನಿವಾರಿಸಿಕೊಳ್ಳಬಹುದು. ಆದಕಾರಣ ಹಸಿರು ಬಟಾಣಿಯಿಂದ ಈ ಹೇರ್ ಪ್ಯಾಕ್ ತಯಾರಿಸಿ.
1 ಕಪ್ ಹಸಿರು ಬಟಾಣಿ ಮತ್ತು ½ ಕಪ್ ಬಾದಾಮಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ ಅದಕ್ಕೆ ½ ಕಪ್ ಜೇನುತುಪ್ಪ ಮತ್ತು 2 ಚಮಚ ನಿಂಬೆ ರಸ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಕವರ್ ಮಾಡಿ. 30 ನಿಮಿಷ ಬಿಟ್ಟು ಕೂದಲನ್ನು ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ವಿಭಜಿತ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಕೂದಲಿನ ಹೊಳಪು ಹೆಚ್ಚಾಗುತ್ತದೆ.