ನಿರಂತರವಾಗಿ ಬರುತ್ತಿರುವ ಸೀನನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ
ಸೋಮವಾರ, 11 ನವೆಂಬರ್ 2019 (06:35 IST)
ಬೆಂಗಳೂರು : ಮೂಗಿನೊಳಗೆ ಧೂಳು ಸೇರಿಕೊಂಡಾಗ ಕೆಲವೊಮ್ಮೆ ನಿರಂತರವಾಗಿ ಸೀನು ಬರಲು ಶುರುವಾಗುತ್ತದೆ. ಇದು ಹೀಗೆ ಮುಂದುವರಿದರೆ ತಲೆ ನೋವು ಶುರುವಾಗುವ ಸಂಭವವಿದೆ. ಇದನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ.
ಒಂದು ಪಾತ್ರೆಯಲ್ಲಿ ರುವ ಬಿಸಿ ನೀರಿಗೆ ಪುದೀನಾ ಎಣ್ಣೆಯನ್ನು ಹಾಕಿ ಟವೆಲ್ ಮುಚ್ಚಿಕೊಂಡು ಆ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ಸೀನು ತಕ್ಷಣ ಸರಿಹೋಗುತ್ತದೆ.
ಬೆಳ್ಳುಳ್ಳಿಯನ್ನು ಜಜ್ಜಿ ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿದರೆ ಸೀನು ಬೇಗ ಮಾಯವಾಗುತ್ತದೆ.