ಬೆಂಗಳೂರು : ತಾಮ್ರದ ಪಾತ್ರೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ತಾಮ್ರದ ವಸ್ತುಗಳಲ್ಲಿ ಶುದ್ಧವಾದ ತಾಮ್ರ ಇರುವುದಿಲ್ಲ. ಆದಕಾರಣ ತಾಮ್ರ ಶುದ್ಧ ಹೌದೋ?ಅಲ್ಲವೋ ಎಂದು ಈ ರೀತಿ ಕಂಡುಹಿಡಿಯಿರಿ.
*ಅಯಸ್ಕಾಂತವನ್ನು ತಾಮ್ರದ ಪಾತ್ರೆಗೆ ಅಂಟಿಸಿ ಆಗ ಅಂಟಿಕೊಂಡರೆ ಅದು ಶುದ್ಧ ತಾಮ್ರದ ಪಾತ್ರೆಯಲ್ಲ.
*ಉಪ್ಪು ಮತ್ತು ವಿನೆಗರ್ ನ್ನು ಮಿಕ್ಸ್ ಮಾಡಿ ತಾಮ್ರದ ಪಾತ್ರೆಗೆ ಹಚ್ಚಿದಾಗ ಅದು ಹಸಿರು ಬಣ್ಣಕ್ಕೆ ತಿರುಗಿದರೆ ಅದು ಶುದ್ಧ ತಾಮ್ರದ ಪಾತ್ರೆ ಎಂದರ್ಥ.
* ನಿಂಬೆ ಹಣ್ಣಿನಿಂದ ತಾಮ್ರದ ಪಾತ್ರೆಯನ್ನು ಉಜ್ಜಿದಾಗ ಅದು ಕಲರ್ ಹೋಗುತ್ತಿದ್ದರೆ ಅದು ಶುದ್ಧ ತಾಮ್ರವಲ್ಲ.