ಬೆಂಗಳೂರು : ಹಲಸಿನ ಹಣ್ಣು ಬಹಳ ಸಿಹಿ. ಇಂತಹ ಸಿಹಿಯಾದ ಹಲಸಿನ ಕಾಯಿಯಿಂದಲೂ ರುಚಿಕರವಾದ ಚಿಪ್ಸ್ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : ಹಲಸಿನ ಕಾಯಿ, ಎಣ್ಣೆ, ಉಪ್ಪು, ಖಾರ ಪುಡಿ.
ಮಾಡುವ ವಿಧಾನ : ಹಲಸಿನ ಕಾಯಿಯ ತೊಳೆಗಳನ್ನು ಉದ್ದವಾಗಿ ಕಟ್ ಮಾಡಿಕೊಳ್ಳಿ. ಬಳಿಕ ಕಾದ ೆಣ್ಣೆಯಲ್ಲಿ ಅವುಗಳನ್ನು ಕರಿಯಿರಿ. ಆಮೇಲೆ ಅದಕ್ಕೆ ಖಾರ ಪುಡಿ ಮತ್ತು ಉಪ್ಪನ್ನು ಮಿಕ್ಸ್ ಮಾಡಿದರೆ ಮಳೆಗಾಲದಲ್ಲಿ ತಿನ್ನಲು ರುಚಿಕರವಾಗಿರುತ್ತದೆ.