ಟ್ವಿಟ್ಟರ್‌ಗೆ ಹೊಸ ಸಿಇಒ ನೇಮಿಸಿದ ಎಲೋನ್ ಮಸ್ಕ್

ಶುಕ್ರವಾರ, 12 ಮೇ 2023 (13:56 IST)
ವಾಷಿಂಗ್ಟನ್ : ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 44 ಶತಕೋಟಿ ಡಾಲರ್ಗೆ ಟ್ವಿಟ್ಟರ್ ಅನ್ನು ಖರೀದಿಸಿದ್ದ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅಂತಿಮವಾಗಿ ಟ್ವಿಟರ್ಗೆ ಹೊಸ ಸಿಇಒ ಅನ್ನು ನೇಮಿಸಿಕೊಂಡಿದ್ದಾರೆ.
 
ಈ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ವಿಟರ್ ಮುನ್ನಡೆಸಲು ಮಹಿಳೆಯೊಬ್ಬರು ಬರುತ್ತಾರೆ ಎಂದು ತಿಳಿಸಿದ್ದಾರೆ. ನಾನು ಟ್ವಿಟರ್ಗೆ ಹೊಸ ಸಿಇಒ ಅನ್ನು ನೇಮಕ ಮಾಡಿದ್ದೇನೆ ಎಂದು ತಿಳಿಸಲು ಉತ್ಸುಕನಾಗಿದ್ದೇನೆ.

ಅವರು ಇನ್ನು 6 ವಾರಗಳಲ್ಲಿ ಸಿಇಒ ಸ್ಥಾನ ಅಲಂಕರಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದ್ರೆ ಆಕೆ ಯಾರು ಏನು? ಎಂಬುದನ್ನ ಅವರು ತಿಳಿಸಿಲ್ಲ. ಆದರೆ 6 ವಾರಗಳಲ್ಲಿ ಹೊಸ ಸಿಇಒ ಬರುತ್ತಾರೆ ಎಂಬ ಅಂಶ ಮಾತ್ರ ಟ್ವಿಟರ್ನಲ್ಲಿದೆ. ಎನ್ಬಿಸಿ ಯುನಿವರ್ಸಲ್ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟರ್ನ ಹೊಸ ಸಿಇಒ ಆಗಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಟ್ವಿಟ್ಟರ್ಗೆ ಹೊಸ ಸಿಇಒ ಬಂದ ನಂತರ ಮಸ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಚೀಫ್ ಟೆಕ್ನಾಲಜಿ ಆಫೀಸರ್) ಆಗಿ ಮುಂದುವರಿಯಲಿದ್ದಾರೆ. ಭವಿಷ್ಯದಲ್ಲಿ ಸ್ಟಾಫ್ವೇರ್ ಹಾಗೂ ಇತರ ವ್ಯವಹಾರ ನೋಡಿಕೊಳ್ಳುವುದಾಗಿ ಮಸ್ಕ್ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ