ರಾತ್ರೋ ರಾತ್ರಿ ಸ್ಟಾರ್ ಆದ ರಾಹುಲ್ ತೆವಾತಿಯಾ ಹಳೇ ಟ್ವೀಟ್ ಗಳು ಈಗ ವೈರಲ್

ಸೋಮವಾರ, 28 ಸೆಪ್ಟಂಬರ್ 2020 (09:51 IST)
ದುಬೈ: ರಾಜಸ್ಥಾನ್ ರಾಯಲ್ಸ್ ಪರ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಮಿಂಚುತ್ತಿರುವ ಯುವ ಆಟಗಾರ ರಾಹುಲ್ ತೆವಾತಿಯಾ ಈಗ ಸ್ಟಾರ್ ಆಗಿಬಿಟ್ಟಿದ್ದಾರೆ.

 

ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ದಾಖಲೆಯ ರನ್ ಚೇಸ್ ಮಾಡುವಲ್ಲಿ ಪ್ರಧಾನ ಪಾತ್ರವಹಿಸಿದ್ದ ತೆವಾತಿಯ 31 ಎಸೆತಗಳಿಂದ 53 ರನ್ ಗಳಿಸಿದ್ದರು. ಕಳೆದ ಪಂದ್ಯದಲ್ಲಿ 3 ವಿಕೆಟ್ ಕಿತ್ತು ಗಮನ ಸೆಳೆದಿದ್ದರು. ಒಟ್ಟಾರೆ ಈ ಪ್ರದರ್ಶನಗಳಿಂದಾಗಿ ರಾಹುಲ್ ಎಲ್ಲರ ಮೆಚ್ಚಿನ ಆಟಗಾರರಾಗಿದ್ದಾರೆ. ಇದೀಗ ರಾಹುಲ್ ಹಿಂದೆ ಮಾಡಿದ್ದ ಟ್ವೀಟ್ ಗಳನ್ನು ನೆಟ್ಟಿಗರು ನೆನೆಸಿಕೊಳ್ಳುತ್ತಿದ್ದಾರೆ. ಭರವಸೆ ಕಳೆದುಕೊಳ್ಳಬೇಡ, ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡ, ಆಶಾವಾದವಿರಲಿ ಎಂಬಿತ್ಯಾದಿ ಸ್ಪೂರ್ತಿದಾಯಕ ಟ್ವೀಟ್ ಗಳನ್ನು ರಾಹುಲ್ ಈ ಮೊದಲು ಮಾಡಿದ್ದರು. ಅದನ್ನು ಅವರೀಗ ಮಾಡಿ ತೋರಿಸಿದ್ದಾರೆ ಎಂದು ನೆಟ್ಟಿಗರು ಹೊಗಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ