ಕನ್ನಡಿಗರಿಗೆ ಆರ್​ಸಿಬಿ ತಂಡದಲ್ಲೂ ಮೀಸಲಾತಿ ಕಲ್ಪಿಸಿ: ಅಭಿಮಾನಿಗಳ ಒಕ್ಕೊರಲ ಒತ್ತಾಯ

Sampriya

ಶುಕ್ರವಾರ, 19 ಜುಲೈ 2024 (14:20 IST)
Photo Courtesy X
ಬೆಂಗಳೂರು: ರಾಜ್ಯದಲ್ಲಿರುವ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳ ಆಡಳಿತಾತ್ಮಕ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆ ಅಂಗೀಕಾರ ಪಡೆಯುತ್ತಿದ್ದಂತೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲೂ ಮೀಸಲಾತಿ ನೀಡಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಆರ್‌ಸಿಬಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಪ್ರತಿ ಬಾರಿಯೂ ಕನ್ನಡಿಗ ಆಟಗಾರರಿಗೆ ಅವಕಾಶ ನೀಡುವುದಿಲ್ಲ. ಪ್ರತಿ ಬಾರಿ ಹರಾಜು ನಡೆದಾಗಲೂ ಆರ್​ಸಿಬಿ ಅಭಿಮಾನಿಗಳು ಕನ್ನಡಿಗ ಆಟಗಾರರ ಕಡೆಗಣನೆಯ ಬಗ್ಗೆ ಫ್ರಾಂಚೈಸಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಲೇ ಇರುತ್ತಾರೆ.

ಇದೀಗ ಕರ್ನಾಟಕದಲ್ಲಿ ಖಾಸಗಿ ಕೈಗಾರಿಕೆಗಳಲ್ಲಿ ಸರ್ಕಾರ ಮೀಸಲಾತಿ ಜಾರಿಗೆ ತರುತ್ತಿರುವ ಬೆನ್ನಲ್ಲೇ ಐಪಿಎಲ್​ನಲ್ಲಿ ಆರ್​ಸಿಬಿ ತಂಡದಲ್ಲಿಯೂ ಶೇ 50ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದಾರೆ. ಆರ್​ಸಿಬಿಯ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೀಸಲಾತಿ ಜಾರಿ ಮಾಡುವಂತೆ ಹಲವು ಟ್ವೀಟ್​ ಮಾಡಲಾರಂಭಿಸಿದ್ದಾರೆ.

ಐಪಿಎಲ್​ ಆರಂಭವಾಗಿ 17 ಆವೃತ್ತಿ ಕಳೆದರೂ ಕೂಡ ಆರ್​ಸಿಬಿ ಕಪ್​ ಗೆದ್ದಿಲ್ಲ. ನಮ್ಮ ರಾಜ್ಯದ ಅದೆಷ್ಟೋ ಸ್ಟಾರ್​ ಆಟಗಾರರಿದ್ದರೂ ಕೂಡ ಅವರನ್ನು ಆರ್​ಸಿಬಿ ಖರೀದಿ ಮಾಡದೆ ಸರಿಯಾಗಿ ಆಡಲು ಬಾರದ ಆಟಗಾರರಿಗೆ ಅತ್ಯಧಿಕ ಮೊತ್ತದ ಬಿಡ್​ ಮಾಡಿ ತಂಡ ಸೇರಿಸಿಕೊಳ್ಳುತ್ತಿದೆ. ಈ ಬಾರಿಯ ಮೆಗಾ ಹರಾಜಿನಲ್ಲಾದರು ಕನ್ನಡಿಗ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ