Share Market ಹೂಡಿಕೆದಾರರಿಗೆ ಕೊನೆಗೂ ಗುಡ್ ನ್ಯೂಸ್: ಇಂದು ಮಾರುಕಟ್ಟೆ ಹೇಗಿದೆ ನೋಡಿ

Krishnaveni K

ಮಂಗಳವಾರ, 8 ಏಪ್ರಿಲ್ 2025 (11:27 IST)
ಮುಂಬೈ: ನಿನ್ನೆ ತೀವ್ರ ಕುಸಿತ ಕಂಡು ಕಂಗಾಲು ಮಾಡಿದ್ದ ಷೇರು ಮಾರುಕಟ್ಟೆ ಇಂದು ನೆಮ್ಮದಿ ನೀಡುವಂತಿದೆ. ಇಂದು ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.

ನಿನ್ನೆ ದಿನ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ನೀತಿಯಿಂದಾಗಿ ಭಾರತದ ಷೇರುಮಾರುಕಟ್ಟೆಯ ಭಾರೀ ಇಳಿಕೆಯಾಗಿತ್ತು. ಸೆನ್ಸೆಕ್ಸ್ ಅಂಕ 2226 ಅಂಕ ಕುಸಿತವಾಗಿ ದಾಖಲೆ ಮಾಡಿತ್ತು. 14 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿತ್ತು.

ಇದರಿಂದ ಹೂಡಿಕೆದಾರರು ಕಂಗಾಲಾಗಿದ್ದರು. ನಿನ್ನೆಯ ಮಾರುಕಟ್ಟೆ ಪರಿಸ್ಥಿತಿ ನೋಡಿ ಎಷ್ಟೋ ಜನ ಹೂಡಿಕೆ ಮಾಡಲೂ ಹಿಂದೇಟು ಹಾಕುವಂತಾಗಿತ್ತು. ಆದರೆ ಇಂದು ಮಾರುಕಟ್ಟೆ ಸ್ಥಿತಿ ಕೊಂಚ ಸುಧಾರಿಸಿಕೊಂಡಿದೆ. ಇಂದು ಎಲ್ಲವೂ ಏರಿಕೆಯಲ್ಲಿದೆ.

ಸೆನ್ಸೆಕ್ಸ್ ಇಂದು 669.13 ಅಂಕ ಏರಿಕೆ ಕಂಡಿದ್ದು, 73,807.03 ಮೌಲ್ಯ ಹೊಂದಿದೆ. ನಿಫ್ಟಿ 50 ಇಂದು 225.45 ಅಂಕ ಏರಿಕೆ ಕಂಡಿದೆ. ನಿಫ್ಟಿ ಬ್ಯಾಂಕ್ 401.35 ಅಂಕ ಏರಿಕೆಯಾಗಿದೆ. ನಿಫ್ಟಿ ಮಿಡ್ ಕ್ಯಾಪ್ ಬರೋಬ್ಬರಿ 755. 25 ಅಂಕ ಏರಿಕೆಯಾಗಿದೆ. ಹೀಗಾಗಿ ನಿನ್ನೆ ನಷ್ಟದ ಭೀತಿಯಲ್ಲಿದ್ದ ಹೂಡಿಕೆದಾರರು ಇಂದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ