ಹೊಸ ವರ್ಷಕ್ಕೆ ಮಾರಾಟವಾಗುತ್ತಿರುವ ಟಾಪ್ 5 ಮೊಬೈಲ್ ಗಳು ಯಾವುವು ಬೆಲೆ ಎಷ್ಟು ನೋಡಿ

Krishnaveni K

ಮಂಗಳವಾರ, 31 ಡಿಸೆಂಬರ್ 2024 (09:39 IST)
Photo Credit: X


ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಅಲ್ಟ್ರಾ 5ಜಿ ಎಐ ಸ್ಮಾರ್ಟ್ ಫೋನ್ ಅತ್ಯಾಧುನಿಕ ಫೀಚರ್ ಗಳನ್ನೊಳಗೊಂಡಿದೆ. 256 ಸ್ಟೋರೇಜ್ ಕೆಪಾಸಿಟಿ, 12 ಜಿಬಿ ರಾಮ್ ಇದರ ಪ್ರಮುಖ ಫೀಚರ್. ಈ ಫೋನ್ ನ ಆಫರ್ ಬೆಲೆ 72,999 ರೂ.ಗಳು.

ಪೊಕೊ ಎಂ6 ಪ್ಲಸ್
ಬಜೆಟ್ ಕಡಿಮೆಯಿದೆ, ಹೆಚ್ಚು ಫೀಚರ್ಸ್ ಬೇಕೆಂದರೆ ಪೊಕೋ ಎಂ6 ಪ್ಲಸ್ 5 ಜಿ ಫೋನ್ ಖರೀದಿಸಬಹುದು. ಪೊಕೊ ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಬ್ರ್ಯಾಂಡ್ ಆಗಿದೆ. ಈ ಫೋನ್ 6 ಜಿಬಿ ರಾಮ್, 128 ಜಿಬಿ ಸ್ಟೋರೇಜ್ ಕೆಪಾಸಿಟಿ ಹೊಂದಿದೆ. ಇದರ ಬೆಲೆ ಆನ್ ಲೈನ್ ನಲ್ಲಿ ಕೇವಲ 10,999 ರೂ.ಗಳು.

ರೆಡ್ ಮಿ ನೋಟ್ 13
ಕಡಿಮೆ ಬಜೆಟ್ ಹಾಗೂ ಉತ್ತಮ ಫೀಚರ್ ಗಳು ಬೇಕೆಂದು ಬಯಸುವವರು ರೆಡ್ ಮಿ ಫೋನ್ ಖರೀದಿಸಬಹುದು. ರೆಡ್ ಮಿ ನೋಟ್ 13 5 ಜಿ ಫೋನ್ 8 ಜಿಬಿ ರಾಮ್, 256 ಜಿಬಿ ಸ್ಟೋರೇಜ್ ಕೆಪಾಸಿಟಿ ಒದಗಿಸುತ್ತದೆ. ಅಮೆಝೋನ್ ನಲ್ಲಿ ಇದರ ಬೆಲೆ 15,183 ರೂ.ಗಳು.

ವಿವೊ ಟಿ3 ಎಕ್ಸ್
ವಿವೊ ಬ್ರ್ಯಾಂಡ್ ಕ್ಯಾಮರಾ ಕ್ವಾಲಿಟಿಗೆ ಇತ್ತೀಚೆಗಿನ ದಿನಗಳಲ್ಲಿ ಹೆಸರು ವಾಸಿಯಾಗಿದೆ. ಕಡಿಮೆ ಬಜೆಟ್ ನಲ್ಲಿ ಸಿಗಬಹುದಾದ ಫೋನ್ ಎಂದರೆ ವಿವೊ ಟಿ3 ಎಕ್ಸ್ 5 ಜಿ ಫೋನ್. ಈ ಫೋನ್ 6 ಜಿಬಿ ರಾಮ್ ಮತ್ತು 126 ಜಿಬಿ ಸ್ಟೋರೇಜ್ ಕೆಪಾಸಿಟಿ ಹೊಂದಿದೆ. ಇದರ ಬೆಲೆ ಕೇವಲ 14,249 ರೂ.ಗಳಾಗಿವೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ15
ಕೊಂಚ ಕಡಿಮೆ ಬಜೆಟ್ ನಲ್ಲಿ ಸ್ಯಾಮ್ಸಂಗ್ ಬ್ರ್ಯಾಂಡ್ ಫೋನೇ ಬೇಕು ಎಂದರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ15 5 ಜಿ ಪ್ರೈಮ್ ಎಡಿಷನ್ ಫೋನ್ ಖರೀದಿಸಬಹುದು. ಇದು 8 ಜಿಬಿ ರಾಮ್ ಹೊಂದಿದ್ದು 128 ಜಿಬಿ ಸ್ಟೋರೇಜ್ ಕೆಪಾಸಿಟಿ ಹೊಂದಿದೆ. ಈ ಫೋನ್ ಸದ್ಯಕ್ಕೆ 13,499 ರೂ.ಗೆ ಅಮೆಝೋನ್ ನಲ್ಲಿ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ