ಬಜೆಟ್2019:ಸಣ್ಣ ಉದ್ಯಮಿಗಳಿಗೆ, ರಿಟೇಲರ್‌ಗಳಿಗೆ ಪಿಂಚಣಿ ಘೋಷಣೆ
ಶುಕ್ರವಾರ, 5 ಜುಲೈ 2019 (13:38 IST)
ನವದೆಹಲಿ: ವಾರ್ಷಿಕವಾಗಿ 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ವಹಿವಾಟುವಿರುವ ಉದ್ಯಮಿಗಳಿಗೆ ಪಿಂಚಣಿ ಸೌಲಭ್ಯ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ಪ್ರಧಾನಮಂತ್ರಿ ಕರ್ಮಯೋಗಿ ಮನ್ ಧನ್ ಯೋಜನಾ ಅಡಿಯಲ್ಲಿ 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ವಹಿವಾಟು ನಡೆಸುವ ಸಣ್ಣ ಉದ್ಯಮಿಗಳಿಗೆ ಮತ್ತು ರಿಟೇಲರ್‌ಗಳಿಗೆ ಪಿಂಚಣಿ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದೇಶದ ಮೂರು ಕೋಟಿ ಸಣ್ಣ ಉದ್ಯಮಿಗಳು, ರಿಟೇಲರ್‌ಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಪ್ರತಿಯೊಬ್ಬರ ಖಾತೆಗೆ ಪಿಂಚಣಿಯನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.