ಮೃಗೀಯರಾದ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ನೀತಿ ಪಾಠ ಹೇಳಿದ ಬಿಗ್‌ಬಾಸ್‌

Sampriya

ಶುಕ್ರವಾರ, 4 ಅಕ್ಟೋಬರ್ 2024 (19:00 IST)
Photo Courtesy X
ಬಿಗ್‌ ಬಾಸ್ ಸೀಸನ್ 11 ಶುರುವಾಗಿ ಐದು ದಿನಗಳಾಗಿದ್ದು, ಈಗಾಗಲೇ ಸ್ಪರ್ಧಿಗಳ ಮಧ್ಯೆ ಟಾಸ್ಕ್ ವಿಚಾರವಾಗಿ ಜಗಳ, ಭಿನ್ನಾಭಿಪ್ರಾಯ ಶುರುವಾಗಿದೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆ ಕಾವು ಪಡೆದುಕೊಳ್ಳುತ್ತಿದ್ದು, ಇದೀಗ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಸ್ಪರ್ಧಿಗಳ ಮಧ್ಯೆ ಟಾಸ್ಕ್ ವಿಚಾರವಾಗಿ ಹೊಡೆದಾಟ ಜೋರಾಗಿಯೇ ನಡೆದಿದೆ.  ಈ ಪರಿಣಾಮ, ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ಗಾಯಗೊಂಡಿದ್ದಾರೆ.

5ನೇ ದಿನದಂದು ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದೆ. ಬ್ಯಾಸ್ಕೆಟ್ ಬಾಲ್‌ಗಳನ್ನು ಸಂಗ್ರಹಿಸಿ, ತಮಗೆ ನಿಗದಿ ಪಡಿಸಿದ ಸ್ಥಳದಲ್ಲೆ ಸಂಗ್ರಹಿಸಬೇಕೆಂದು. ಎದುರಾಳಿ ತಂಡದವರು ಅದನ್ನು ತಡೆದು ಚೆಂಡುಗಳನ್ನು ಹಾಕದೇ ಇರೋ ರೀತಿಯಲ್ಲಿ ತಡೆಯಬೇಕಿತ್ತು. ಚೆಂಡು ಸಂಗ್ರಹಿಸಲು ಮತ್ತು ಅದನ್ನು ತಡೆಯಲು ಹರಸಾಹಸವೇ ನಡೆದಿದೆ.

ಈ ಜಟಾಪಟಿಯಲ್ಲಿ ಸ್ಪರ್ಧಿಗಳು ತುಂಬಾನೇ ಅಗ್ರೆಸ್ಸಿವ್ ಆಗಿ ಆಟವಾಡಿದ್ದು, ಈ ವೇಳೆ ಮಾನಸ, ಶಿಶಿರ್ ಹಾಗೂ ತ್ರಿವಿಕ್ರಮ್‌ ಗಾಯಗೊಂಡಿದ್ದಾರೆ. ಇನ್ನು ತ್ರಿವಿಕ್ರಮ್ ಅವರನ್ನು ಕೂಡಲೇ ಕನ್ಪೆಷನ್‌ ರೂಂಗೆ ಕಳಹುಸಿ ಆರೋಗ್ಯ ತಪಾಸಣೆ ಮಾಡಲಾಯಿತು. ಇನ್ನೂ ಹೆಚ್ಚಿನ ಚಿಕಿತ್ಸೆ ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಚಿಕಿತ್ಸೆ ಪಡೆದ ನಂತರ ವಾಪಾಸ್ ಬಿಗ್‌ಬಾಸ್ ಮನೆಗೆ ವಾಪಾಸ್ಸಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಿಲೀಸ್ ಆಗಿರೋ ಪ್ರೊಮೋದಲ್ಲಿ ಚೆಂಡು ಕಬಳಿಸುವ ವೇಳೆ ಶಿಶಿರ್ ಕೂಡ ಕೆಳಗೆ ಬಿದ್ದಿರುವುದನ್ನು ನೋಡಬಹುದು. ಇದಷ್ಟೇ ಅಲ್ಲ, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ