ಬೆದರಿಕೆ ಹಾಕಿ ನನ್ನಿಂದ ಕೆಲಸ ಮಾಡಿಸಿಕೊಂಡರು: ನಟಿ ರನ್ಯಾ ರಾವ್ ಶಾಕಿಂಗ್ ಹೇಳಿಕೆ

Krishnaveni K

ಗುರುವಾರ, 6 ಮಾರ್ಚ್ 2025 (16:27 IST)
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಬೆದರಿಕೆ ಹಾಕಿ ನನ್ನಿಂದ ಕೆಲಸ ಮಾಡಿಸಿದರು ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ರನ್ಯಾ ರಾವ್ ರನ್ನು ಬಂಧಿಸಲಾಗಿದ್ದು ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಆರ್ ಐ ಅಧಿಕಾರಿಗಳು ರನ್ಯಾರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ರನ್ಯಾ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ.

ರನ್ಯಾ ಪ್ರತೀ ಬಾರಿ ದುಬೈಗೆ ಹೋಗಿ ಚಿನ್ನ ಕಳ್ಳಸಾಗಣಿಕೆ ಮಾಡಿದರೆ ಲಕ್ಷಾಂತರ ರೂಪಾಯಿ ಕಮಿಷನ್ ಸಿಗುತ್ತಿತ್ತು ಎನ್ನಲಾಗಿತ್ತು. ಆದರೆ ವಿಚಾರಣೆ ವೇಳೆ ಇದೇ ಮೊದಲ ಬಾರಿಗೆ ತಾನು ದುಬೈಗೆ ಹೋಗಿ ಚಿನ್ನ ಸಾಗಣಿಕೆ ಮಾಡಿರುವುದಾಗಿ ಹೇಳಿದ್ದಾರೆ.

ತನಗೆ ಬೆದರಿಕೆ ಹಾಕಿ ಈ ಕೆಲಸ ಮಾಡಲಾಗಿದೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಬೆದರಿಕೆ ಹಾಕುತ್ತಿದ್ದವರು, ಕಿಂಗ್ ಪಿನ್ ಯಾರು ಎಂಬ ವಿಚಾರವನ್ನು ಅಧಿಕಾರಿಗಳು ಈಗ ತನಿಖೆ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ