ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ: ಬಡವರಿಗೆ ಉಚಿತ ಗ್ಯಾಸ್, ಆರೋಗ್ಯ ಯೋಜನೆ

Rajesh patil

ಶುಕ್ರವಾರ, 16 ಫೆಬ್ರವರಿ 2018 (20:13 IST)
ರಾಜ್ಯದ 2018-19ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 5 ವರ್ಷಗಳ ಕಾಲ ಆಡಳಿತ ಪೂರ್ಣಗೊಳಿಸಲು ಸಹಕರಿಸಿದ ರಾಜ್ಯದ ಜನತೆ, ಪ್ರತಿಪಕ್ಷಗಳು, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬೆಂಗಳೂರನ್ನು ಸ್ಟಾರ್ಟ್ ಅಪ್ ನಗರವನ್ನಾಗಿ ರೂಪಿಸಿದ್ದೇವೆ. ನಾನು ಕೇವಲ ಕನಸು ಬಿತ್ತುವವನಲ್ಲ, ಬಿತ್ತಿದ ಕನಸನ್ನು ನನಸು ಮಾಡಿ ಬೆಳೆಸುವವನು ಎಂದಿದ್ದಾರೆ.
 
 ಹೂಡಿಕೆಗೆ ಹೆಚ್ಚು ಆಕರ್ಷಣೀಯ ರಾಜ್ಯವನ್ನಾಗಿ ಮಾಡಿದ್ದೇವೆ. ರೈತರ ಕಷ್ಟ ತಗ್ಗಿಸುವ ಕೆಲಸ ಮಾಡಿದ್ದೇವೆ. ಕೃಷಿ, ಹೈನುಗಾರಿಕೆಯಲ್ಲಿ ನಾವು ಮುಂದಿದ್ದೇವೆ. ಕೃಷಿಗೆ 5080 ಕೋಟಿ ರೂಪಾಯಿ ಅನುದಾನ, ಪಶುಸಂಗೋಪನೆಗೆ 2245 ಕೋಟಿ ರೂಪಾಯಿ ಅನುದಾನ, ಜಲಸಂಪನ್ಮೂಲ ಇಲಾಖೆಗೆ 15,929 ಕೋಟಿ ಅನುದಾನ,ಸಣ್ಣ ನೀರಾವರಿಗೆ 2090 ಕೋಟಿ ರೂ. ಅನುದಾನ. ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ. ಅನುದಾನ,ಮೀನುಗಾರಿಕೆಗೆ 337 ಕೋಟಿ ಅನುದಾನ. ಕ್ರೈಸ್ತರ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ, 30 ಲಕ್ಷ ಫಲಾನುಭವಿಗಳಿಗೆ ಅನಿಲಾಭಾಗ್ಯ ನೀಡಿದ್ದೇವೆ ಎಂದು ಹೇಳಿದ್ದಾರೆ.
 
2018-2019 ಸಾಲಿನ ರಾಜ್ಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ಕುರಿ, ಮೇಕೆ ಸಾಕಾಣಿಕೆಗೆ ಸಾಲಮನ್ನಾ. ರಾಜ್ಯದ 16 ಜಿಲ್ಲೆಗಳಲ್ಲಿ ಕುರಿ ರೋಗ ತಪಾಸಣಾ ಕೇಂದ್ರ. ಮಹಿಳಾ ಸುರಕ್ಷತೆಗಾಗಿ 1000 ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ.
 
ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್. ರಾಜ್ಯದ 19.60 ಲಕ್ಷ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡಿಕೆ.
 
 ತಿರುಮಲದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಅತಿಥಿಗೃಹ, 10 ಡಬಲ್ ಡೆಕ್ಕರ್ ಬಸ್ ಖರೀದಿಗೆ ನಿರ್ಧಾರ. 30 ಬಸ್ ನಿಲ್ದಾಣ, 8 ಬಸ್ ಗಳ ಘಟಕ, 325 ಬಸ್ ತಂಗುದಾಣ ಮೇಲ್ಜರ್ಜೆಗೆ ಏರಿಕೆ.
 
 ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಗೆ 9271 ಕೋಟಿ, ಇಂಧನ ಇಲಾಖೆಗೆ 14136 ಕೋಟಿ ಅನುದಾನ. ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
 
ಅಬ್ಬಬ್ಬಾ..! ಬಜೆಟ್ ಓದಲು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?!
 
ಈ ಬಾರಿ ದಾಖಲೆಯ ಬೃಹತ್ ಗಾತ್ರದ ಬಜೆಟ್ ಓದಿದ ಸಿಎಂ ಸಿದ್ದರಾಮಯ್ಯ ಸುದೀರ್ಘ ಸಮಯ ಬಜೆಟ್ ಓದಿದ ದಾಖಲೆ ಮಾಡಿದರು.
 
ಬೆಳಿಗ್ಗೆ 11.36 ಕ್ಕೆ ಬಜೆಟ್ ಓದಲು ಆರಂಭಿಸಿದ ಸಿಎಂ ಸಂಜೆ 3.45 ರವರೆಗೂ ಬಜೆಟ್ ಓದಿದರು. 163 ಪುಟಗಳ ಬಜೆಟ್ ನ್ನು 4 ಗಂಟೆಗೂ ಹೆಚ್ಚು ಕಾಲ ನಿಂತೇ, ಒಮ್ಮೆಯೂ ವಿರಾಮ ಪಡೆಯದೇ ಓದಿ ಸಿಎಂ ದಾಖಲೆ ಮಾಡಿದರು.
 
ಈ ನಡುವೆ 5 ರಿಂದ 6 ಬಾರಿ ನೀರು ಕುಡಿದರು. ಸಿಎಂ ಸುದೀರ್ಘ ಬಜೆಟ್ ಭಾಷಣ ಮುಗಿಸಿ ಕುಳಿತಾಗ ಸಚಿವರು, ಶಾಸಕರು ಅವರನ್ನು ಅಭಿನಂದಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ