ಅಚ್ಚೇ ದಿನ್ ಬಂದಿರುವುದು ಮೋದಿಯ ಶ್ರೀಮಂತ ಗೆಳೆಯರಿಗೆ ಮಾತ್ರ: ಸಿಎಂ ವಾಗ್ದಾಳಿ

Krishnaveni K

ಶನಿವಾರ, 1 ಮಾರ್ಚ್ 2025 (20:29 IST)
ಬೆಂಗಳೂರು: ಅಚ್ಚೇ ದಿನ್ ಬಂದಿರುವುದು ಮೋದಿಯವರ ಶ್ರೀಮಂತ ಕೋಟ್ಯಾಧಿಪತಿ ಗೆಳೆಯರಿಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾಗಿರುವ ತೆರಿಗೆ ಪಾಲನ್ನು ಶೇ.41 ರಿಂದ ಶೇ. 40 ಕ್ಕೆ ಇಳಿಸುವ ಪ್ರಸ್ತಾವನೆ ಬಗ್ಗೆ ಈಗ ಸಿಎಂ ಸಿದ್ದರಾಮಯ್ಯ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದೀಗ ಸಿಎಂ ಅಧಿಕೃತ ಟ್ವೀಟ್ ಖಾತೆಯಿಂದ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಚ್ಚೇ ದಿನ್ ಪ್ರಧಾನಿ ಮೋದಿಯವರ ಶತ ಕೋಟ್ಯಾಧಿಪತಿ ಗೆಳೆಯರಿಗಷ್ಟೇ ಬಂದಿದೆ. ಈಗ ವಿಕಸಿತ ಭಾರತದ ಕತೆಯೂ ಮರೀಚಿಕೆಯಾಗಿದೆ.  2024-25 ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕಳೆದ ಆರ್ಥಿಕ ವರ್ಷಕ್ಕಿಂತ ಶೇ. 3.3 ರಷ್ಟು ಇಳಿಕೆಯಾಗಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದ್ದ ಶೇ. 6.8 ಕ್ಕಿಂತಲೂ ಕಡಿಮೆಯಾಗಿದೆ.

ಉತ್ಪಾದನಾ ವಲಯ ಸೇರಿದಂತೆ ಇತರೆ ವಲಯಗಳಲ್ಲಿನ ಬೆಳವಣಿಗೆ ಕುಸಿತವೇ ಇದಕ್ಕೆ ಕಾರಣ. ಮೋದಿ ಆಡಳಿತ ದೇಶದ ಅರ್ಥವ್ಯವಸ್ಥೆಯ ಬೆನ್ನು ಮೂಳೆ ಮುರಿಯುತ್ತಿದೆ’ ಎಂದು ಸಿಎಂ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ