ಬಿಬಿಸಿ ವಿರುದ್ದ ಕೇಂದ್ರ ಸರ್ಕಾರದ ನಿಲುವನ್ನ ಖಂಡಿಸಿ ಧರಣಿ ಮಾಡಲು ನಿರ್ಧಾರ- ವಾಟಾಳ್ ನಾಗರಾಜ್

ಗುರುವಾರ, 16 ಫೆಬ್ರವರಿ 2023 (17:46 IST)
ಬಹಳ ಗಂಭೀರಾವಾದಂತಹ ವಿಚಾರದ ಬಗ್ಗೆ ಇಡೀ ರಾಜ್ಯದ ಜನ‌ಚಿಂತನೆ ಮಾಡಬೇಕಿದೆ.ಚಿಂತಕರರು ಪ್ರಜಾಪ್ರಭುತ್ವ ವಾದಿಗಳು ಚಿಂತನೆ ಮಾಡಬೇಕು.ಮೊದಲು ನಮ್ಮ ಶಾಸನ ಸಭೆಯಲ್ಲಿ ಕೋಳಿವಾಡ ಇದ್ದಾಗ ಗಲಾಟೆಯಾಯ್ತು.ಮಾದ್ಯಮದವರನ್ನ ಸದನದಲ್ಲಿ ಬಿಡ ಬೇಕು ಅಂತಾ ಸದನದ ಕಲಾಪವನ್ನ ಜನರಿಗೆ ತೋರಿಸೋದ್ರಿಂದ ನಮ್ಮ ಪ್ರತಿನಿಧಿಗಳು  ಯಾವ ರೀತಿ ಇದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
 
ಶಾಸನಸಭೆಯಲ್ಲಿ ಸದನ ನಡೆಸೋದು ತುರ್ತು ಪರಿಸ್ಥಿತಿ ,ಸರ್ವಾಧಿಕಾರಕ್ಕೆ ದಾರಿ ಮಾಡಿ ಕೊಡುತ್ತೆ.ಸ್ಪೀಕರ್ ಸದನದ ಯಜಮಾನರು,ಮಾಧ್ಯಮದವರು ಸದನವನ್ನ ಅವಲೋಕಿಸುವವುದಕ್ಕೆ ಅವಕಾಶ ಕೊಡಬೇಕಿತ್ತು.ಸ್ಪೀಕರ್ ಕೂಡ ಗಮನ ಹರಿಸಿಲ್ಲಾ.ಪಿ ಲಂಕೇಶ್ ವಿರುದ್ದ ಹಕ್ಕುಚ್ಯುತಿ ತಂದು ಜೈಲಿಗೆ ಹಾಕಬೇಕೆಂದು ತೀರ್ಮಾನ ಮಾಡಲಾಗಿತ್ತು.ಇದು ಹಕ್ಕುಚ್ಯುತಿ ಆಗೊಲ್ಲಾ ಅಂತಾ ನಾನು ಲಂಕೇಶ್ ಪರ ನಿಂತೆ.ಸದನದಲ್ಲಿ ಅವರ ಪರವಾಗಿ ನಾನು ಮಾತನಾಡಿದ್ದೆ.ಬಿಬಿಸಿ ಡಾಕ್ಯುಮೆಂಟರಿ ಎಲ್ಲಾ ಕಡೆ ಸದ್ದು ಮಾಡ್ತಿದೆ.ಸುಪ್ರಿಂಕೋರ್ಟ್ ಗೆ ಇದರ ಬಗ್ಗೆ ಕೇಂದ್ರ ಸರ್ಕಾರ ಸರಿಯಾಗಿ ಉತ್ತರ ನೀಡಿಲ್ಲ.ಕಚೇರಿಗಳಿಗೆ ಅಧಿಕಾರಿಗಳನ್ನ ನುಗ್ಗಿಸಿ ಭಯಬೀಳುಸ್ತಿದ್ದಾರೆ.ಮುಂದಿನ‌ ಬಾನುವಾರ ವಾಟಾಳ್ ಪಕ್ಷ ಕೇಂದ್ರದ ನೀತಿಯನ್ನ ವಿರೋಧಿಸಿ ಬಿಬಿಸಿ ವಿರುದ್ದ ಕೇಂದ್ರ ಸರ್ಕಾರದ ನಿಲುವನ್ನ ಖಂಡಿಸ್ತಿವಿ ಧರಣಿ ಮಾಡುವುದಾಗಿ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ