ಕೊರೊನಾದಿಂದ ಭಾರತದಲ್ಲಿ 5.8ಲಕ್ಷ ಆಪರೇಷನ್ ಮುಂದೂಡಿಕೆ, ರದ್ದು

ಶನಿವಾರ, 16 ಮೇ 2020 (11:05 IST)
ನವದೆಹಲಿ : ಕೊರೊನಾದಿಂದ ಭಾರತದಲ್ಲಿ 5.8ಲಕ್ಷ ಆಪರೇಷನ್ ಮುಂದೂಡಿಕೆ ಹಾಗೂ ರದ್ದುಮಾಡಲಾಗಿದೆ  ಎಂದು ಅಂತರಾಷ್ಟ್ರೀಯ ಒಕ್ಕೂಟ ಅದ್ಯಯನ ವರದಿಯಲ್ಲಿ ಬಹಿರಂಗವಾಗಿದೆ.


ಬ್ರಿಟಿಷ್ ಜರ್ನಲ್ ಆಫ್ ಸರ್ಜರಿ ಯಲ್ಲಿ ವರದಿಯಲ್ಲಿ ಈ ಬಗ್ಗೆ  ಪ್ರಕಟವಾಗಿದ್ದು, ವಿಶ್ವದಾದ್ಯಂತ 2.8 ಕೋಟಿ ಶಸ್ತ್ರಚಿಕಿತ್ಸೆಗಳು ಮುಂದೂಡಿಕೆಯಾಗಿವೆ ಎನ್ನಲಾಗಿದೆ. ಹಾಗೇ ಶೇಖಡಾ 72.3ರಷ್ಟು ಶಸ್ತ್ರಚಿಕಿತ್ಸೆಗಳು ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


ಅಲ್ಲದೇ ಇವೆಲ್ಲವೂ ಕ್ಯಾನ್ಸರೇತರ ಪ್ರಕರಣ ಎಂದು ಗುರುತಿಸಲಾಗಿದೆ. ಹಾಗೇ ವಿಶ್ವದ್ಯಂತ 63 ಲಕ್ಷ ಮೂಳೆ ಸಂಬಂಧಿತ ಶಸ್ತ್ರಚಿಕಿತ್ಸೆ ರದ್ದಾಗಿದ್ದು, ಜತೆಗೆ 23 ಲಕ್ಷ ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆ ವಿಳಂಬವಾಗಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ