ಹರಿಯಾಣ: ಒಲಿಂಪಿಕ್ ಕುಸ್ತಿ ಸ್ಪರ್ಧೆಯಿಂದ ಕೊನೆ ಕ್ಷಣದಲ್ಲಿ ವಿನೇಶ್ ಫೋಗಟ್ ಅವರು ಅನರ್ಹರಾಗಿರುವುದರ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಸದಸ್ಯರನ್ನು ಪ್ರಶ್ನಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಡುವಲ್ಲಿ ವಿನೇಶ್ ಅವರು ಒಂದು ಹೆಜ್ಜೆ ಹಿಂದೆಯಿದ್ದರು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದರೆ ವಿನೇಶ್ ಅವರು ಇಂದು ರಾತ್ರಿ ಯುನೈಟೆಡ್ ಸ್ಟೇಟ್ಸ್ ಕುಸ್ತಿಪಟು ಸಾರಾ ಆನ್ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲಿದ್ದರು.
ಆಕೆಯ ತೂಕವು ವರ್ಗಕ್ಕಿಂತ ಹೆಚ್ಚಿರುವ ಕಾರಣ ಆಕೆಯನ್ನು ಈವೆಂಟ್‌ನಿಂದ ಅನರ್ಹಗೊಳಿಸಲಾಯಿತು. ವಿನೇಶ್ ಅವರು ಅನುಮತಿಸಲಾದ ತೂಕಕ್ಕಿಂತ 100ಗ್ರಾಂ ಹೆಚ್ಚಿದ್ದರಿಂದ ಅವರನ್ನು ಸ್ಪರ್ಧೆಯಿಂದ ಹೊರಕ್ಕಿಡಲಾಯಿತು.
ಈ ಸಂಬಂಧ ಸಿಎಂ ಭಗವಂತ್ ಮಾನ್ ಅವರು ಪ್ರತಿಕ್ರಿಯಿಸಿ, ವಿನೇಶ್ ಅವರ ತೂಕವನ್ನು ಮೇಲ್ವಿಚಾರಣೆ ಮಾಡಿದ ಐಒಎ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಇದನ್ನು ನಾನು ರಾಜಕೀಯವಾಗಿ ಬಳಸಲು ಇಚ್ಛಿಸುವುದಿಲ್ಲ. ಆದರೆ ದಯವಿಟ್ಟು ಹೇಳಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸದಸ್ಯರು ರಜೆಯ ಮೇಲೆ ಅಲ್ಲಿಗೆ ಹೋಗಿದ್ದಾರೆಯೇ? ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಒಮ್ಮೆಯೂ ಇದನ್ನು ವಿರೋಧಿಸಲಿಲ್ಲ. ವಿನೇಶ್ ಫೈನಲ್‌ಗೆ ತಲುಪಿದಾಗ ಶುಭಕೋರದ ಪ್ರಧಾನಿ ಮೋದಿ ಅವರು ಆಕೆಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸಿದಾಗ ಪೋಸ್ಟ್ ಹಾಕುತ್ತಾರೆ ಎಂದು ಹೇಳಿದರು.
"ಅವಳ ತೂಕವನ್ನು ಪರೀಕ್ಷಿಸುವುದು ಅವಳ ತರಬೇತುದಾರರು ಮತ್ತು ಫಿಸಿಯೋಥೆರಪಿಸ್ಟ್‌ಗಳ ಕೆಲಸವಾಗಿರುತ್ತೆ. ಲಕ್ಷ ಲಕ್ಷ ಸಂಭಾವಣೆ ತೆಗೆದುಕೊಳ್ಳುವ ಇವರು ಪ್ಯಾರಿಸ್‌ಗೆ ಹೋಗಿರುವುದು ಮೋಜು ಮಸ್ತಿಗಾಗಿಯೇ ಎಂದು ಪ್ರಶ್ನಿಸಿದರು.