ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿ!

ಬುಧವಾರ, 7 ಜೂನ್ 2023 (12:17 IST)
ಹೈದರಾಬಾದ್ : ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿಯನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
 
ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 16 ವರ್ಷದ ಹುಡುಗಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ನೋವು ಮತ್ತು ಅಡ್ಡ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಆಕೆ ಚೈಲ್ಡ್ಲೈನ್ನ ಸಹಾಯ ಪಡೆದು ದೂರು ದಾಖಲಿಸಿದ್ದಾಳೆ. ಈ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ವರ್ಷಗಳಿಂದ ಈ ಹಾರ್ಮೋನ್ ಮಾತ್ರೆ ಗಳನ್ನು ಆಕೆ ಸೇವಿಸುತ್ತಿದ್ದಳು. ಇದರಿಂದಾಗಿ ಪ್ರಜ್ಞಾಹೀನತೆ ಮತ್ತು ದೇಹದಲ್ಲಿ ತೀವ್ರವಾದ ಊತವನ್ನು ಅನುಭವಿಸಿದ್ದಾಳೆ. ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ದೈಹಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ತನ್ನ ತಾಯಿ ಒತ್ತಾಯಿಸುತ್ತಿದ್ದಳು ಎಂದು ಹುಡುಗಿ ಬಹಿರಂಗಪಡಿಸಿದ್ದಾಳೆ.

 ಬಲವಂತದ ಔಷಧ ತನ್ನ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಗೊತ್ತಾದಾಗ ಯುವತಿ ಆಘಾತಕ್ಕೊಳಗಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ