ಕೊರೊನಾ ನಿಯಂತ್ರಿಸುವ ಕುರಿತು ಕೇಂದ್ರಕ್ಕೆ ಸಲಹೆ ನೀಡಿದ ರಾಹುಲ್ ಗಾಂಧಿ

ಶುಕ್ರವಾರ, 17 ಏಪ್ರಿಲ್ 2020 (06:51 IST)

ನವದೆಹಲಿ : ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಜೊತೆ ದೇಶದಲ್ಲಿ ಪರೀಕ್ಷೆಗಳು ಹೆಚ್ಚಾಗಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
 


 

ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಲಾಕ್ ಡೌನ್ ಎಂಬುದು ಸಮಸ್ಯೆಯನ್ನು ತಾತ್ಕಾಲಿಕವಾಗಿ ಮಾತ್ರ ಮುಂದೂಡಿಕೆ ಮಾಡಿದೆ. ಲಾಕ್ ಡೌನ್ ಮುಗಿಯುವ ವೇಳೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

 

ಹಾಗೇ ಕೊರೊನಾ ತಡೆಯಲು ಲಾಕ್ ಡೌನ್ ಒಂದೇ ಮುಖ್ಯವಲ್ಲ. ಇದರೊಂದಿಗೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಹಾಟ್ ಸ್ಪಾಟ್ , ನಾನ್ ಹಾಟ್ ಸ್ಪಾಟ್ ಗಳಲ್ಲಿ ಕ್ಷೀಪ್ರವಾಗಿ ಟೆಸ್ಟಿಂಗ್ ಗಳು ನಡೆಯಬೇಕು. ವೈರಸ್ ಹರಡುವ ವೇಗದಲ್ಲೆ ನಮ್ಮ ಪರೀಕ್ಷೆಗಳು ನಡೆದಾಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ