ಕೇದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಶುಕ್ರವಾರ, 20 ಅಕ್ಟೋಬರ್ 2017 (17:55 IST)
ಉತ್ತರಾಖಂಡ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಪುಣ್ಯಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದೇವೇಳೆ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಇಲ್ಲಿ ಕೆಲ ವರ್ಷಗಳನ್ನು ಕಳೆದಿದ್ದೇನೆ. ಭೋಲೆ ಬಾಬಾ ಅವರ ಸೇವೆ ಮಾಡಿಕೊಂಡಿದ್ದೆ. ಅವರು ಆಶೀರ್ವದಿಸಿ ನನ್ನನ್ನು 125 ಕೋಟಿ ಜನರ ಸೇವೆಗೆ ಕಳುಹಿಸಿದರು ಎಂದರು.

'ಕೇದಾರನಾಥ ಪುಣ್ಯ ಕ್ಷೇತ್ರದ ಸರ್ವ ರೀತಿಯಲ್ಲಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಇಲ್ಲಿಗೆ 10 ಲಕ್ಷ ಮಂದಿ ಯಾತ್ರಿಗಳು ಬರಬೇಕು. ಇಲ್ಲಿಗೆ ಬರುವ ಭಕ್ತರಿಗೆ ಸಾರಿಗೆ , ವಸತಿ, ಊಟ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದು ನಮ್ಮ ಗುರಿ ಎಂದರು.

ಧಾರ್ಮಿಕ ಕ್ಷೇತ್ರ ಜತೆಗೆ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವ ಗುರಿಯಿದೆ. ಇಲ್ಲಿರುವ ಮಂದಾಕಿನಿ ನದಿಯಲ್ಲಿ ಸಂಗೀತ ಕಾರಂಜಿ, ಘಾಟ್‌ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡುವ ನಿಟ್ಟಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ