ಶಬರಿಮಲೆ ವಿವಾದ: ಬಂದ ದಾರಿಗೆ ಮರಳಿದ ತೃಪ್ತಿ ದೇಸಾಯಿ

ಶನಿವಾರ, 17 ನವೆಂಬರ್ 2018 (09:03 IST)
ಕೊಚ್ಚಿ: ಇಂದು ಏನೇ ಆಗಲಿ ಶಬರಿಮಲೆ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿದ್ದ ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿದ್ದಾರೆ.

ಮೊನ್ನೆಯೇ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ತೃಪ್ತಿ ದೇಸಾಯಿಗೆ ಪ್ರತಿಭಟನಾಕಾರರು ವಿಮಾನ ನಿಲ್ದಾಣದಿಂದ ಹೊರಗೆ ಬರಲು ಬಿಡಲಿಲ್ಲ. ಹೀಗಾಗಿ ಪೊಲೀಸ್ ಭದ್ರತೆಯಿದ್ದರೂ ತೃಪ್ತಿ ದೇಸಾಯಿ ವಿಮಾನ ನಿಲ್ದಾಣದಲ್ಲಿಯೇ ಸುಮಾರು 12 ಗಂಟೆ ಕಾಲ ಕಾಯಬೇಕಾಯಿತು.

ಹಾಗಿದ್ದರೂ ಹೊರಬರಲಾಗದೇ ಅತ್ತ ಪೊಲೀಸರು ಅಸಹಾಯಕತೆ ಪ್ರದರ್ಶಿಸಿದ್ದರಿಂದ ಬಂದ ದಾರಿಗೆ ಮರಳಬೇಕಾಯಿತು. ಇದರಿಂದ ಹೋರಾಟಗಾರರ ಈ ನಡುವೆ ಭಕ್ತರ ಒತ್ತಡಕ್ಕೆ ಮಣಿದ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ತಿರುವಾಂಕೂರ್ ದೇವಸ್ವಂ ಮಂಡಳಿಗೆ ಸೂಚಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ