ಮಾಲಿಕನ ಕೊಂದಿದ್ದ ಪಿಟ್ ಬುಲ್ ನಾಯಿ ದತ್ತು ಪಡೆಯಲು ಭಾರೀ ಬೇಡಿಕೆ
ಈ ನಾಯಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ನಾಯಿ ಇದೀಗ ಲಕ್ನೋ ಮಹಾನಗರ ಪಾಲಿಕೆಯ ವಶದಲ್ಲಿದ್ದು, ಈ ನಾಯಿಯನ್ನು ದತ್ತು ಪಡೆಯಲು ಕೆಲವು ಪ್ರಾಣಿ ಪ್ರಿಯರು, ಎನ್ ಜಿಒಗಳು ಮುಂದೆ ಬಂದಿದ್ದಾರೆ.
ಬೆಂಗಳೂರಿನ ಎನ್ ಜಿಒ ಸಂಸ್ಥೆಯೊಂದೂ ಪಿಟ್ ಬುಲ್ ಪಡೆಯಲು ಆಸಕ್ತಿ ವ್ಯಕ್ತಪಡಿಸಿದೆಯಂತೆ. ಹಾಗಿದ್ದರೂ ನಿಯಮಗಳಿಗೆ ಅನುಗುಣವಾಗಿ ನಾಯಿಯ ಮಾಲಿಕತ್ವ ನೀಡುವುದಾಗಿ ಮಹಾನಗರ ಪಾಲಿಕೆ ಹೇಳಿದೆ.