ಬಿಜೆಪಿಯಲ್ಲಿರುವ ಸಹೋದರಿ ಬಬಿತಾ ಫೋಗಟ್ ವಿರುದ್ಧವೇ ರಾಜಕೀಯ ಅಖಾಡದಲ್ಲಿ ಗುದ್ದಾಡಲು ರೆಡಿ ಆದ್ರಾ ವಿನೇಶ್ ಫೋಗಟ್

Sampriya

ಮಂಗಳವಾರ, 20 ಆಗಸ್ಟ್ 2024 (15:46 IST)
Photo Courtesy X
ನವದೆಹಲಿ: ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರು ಮುಂದಿನ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಆದಾಗ್ಯೂ, ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಕೆಲವು ರಾಜಕೀಯ ಪಕ್ಷಗಳು ವಿನೇಶ್ ಅವರನ್ನು ಮನವೊಲಿಸಿ, ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ಆದರೆ ಯಾವ ಪಕ್ಷದ ಮೇಲೆ ವಿನೇಶ್ ಒಲವಿದೆ ಎಂಬುದು ತಿಳಿದುಬಂದಿಲ್ಲ.

100 ಗ್ರಾಂ ಅಧಿಕ ತೂಕದ ಕಾರಣ ಫೈನಲ್‌ನಿಂದ ಅನರ್ಹಗೊಂಡ ನಂತರ, ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯಲ್ಲಿ ವಿನೇಶ್ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.  

ಶನಿವಾರ ತಾಯ್ನಾಡಿಗೆ ಆಗಮಿಸಿದ ವಿನೇಶ್‌ಗೆ ತವರು ಬಲಾಲಿ ಸೋನಿಪತ್‌ನಲ್ಲಿ ಭವ್ಯ ಸ್ವಾಗತ ನೀಡಲಾಯಿತು.

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಅವರು ಇತರ ಕುಟುಂಬ ಸದಸ್ಯರೊಂದಿಗೆ ಹಾರವನ್ನು ಸ್ವೀಕರಿಸಿದರು. ಕುಸ್ತಿ ಪಂದ್ಯಾಟಕ್ಕೂ ವಿದಾಯ ಹೇಳಿರುವ ವಿನೇಶ್ ಫೋಗಟ್ ಅವರು ಇನ್ಮುಂದೆ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ.  ಆದರೆ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ತಿಳಿದಿಲ್ಲ. ಆದರೆ ಸಕ್ರೀಯ ರಾಜಕಾರಣಕ್ಕೆ ಬರುಲು ವಿನೇಶ್ ಫೋಗಟ್ ಹಿಂದೇಟು ಹಾಕಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಹರಿಯಾಣ ವಿಧಾನಸಭೆಯಲ್ಲಿ  ಖ್ಯಾತ ಕುಸ್ತಿಪಟು, ಸಂಬಂಧಿ ಬಬಿಯಾ ಫೋಗಟ್ ವಿರುದ್ಧವೇ ವಿನೇಶ್ ಫೋಗಟ್ ಅವರು ಕಣಕ್ಕಿಳಿಯಲಿದ್ದಾರೆಂಬ ಗುಸು ಗುಸು ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ