ಮಾಡುವ ವಿಧಾನ:
ಒಂದು ಬಾಣಲೆಗೆ 2-3 ಚಮಚ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿಯಾದ ನಂತರ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಕಡಲೆ ಬೇಳೆ ಮತ್ತು ಹೆಚ್ಚಿದ ಕರಿಬೇವನ್ನು ಹಾಕಿ ಬೇಳೆಗಳು ಕೆಂಪಾಗುವವರೆಗೆ ಹುರಿಯಿರಿ. ನಂತರ ಇದಕ್ಕೆ 2 ಕಪ್ ನೀರನ್ನು ಹಾಕಿ. ಸ್ವಲ್ಪ ಕುದಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಇದಕ್ಕೆ ಅಕ್ಕಿ ತರಿಯನ್ನು ಬೆರೆಸಿ ನೀರು ಆರುವವರೆಗೆ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ನಂತರ ಸ್ಟೌ ಆಫ್ ಮಾಡಿ ಈ ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿ ಉಗಿಯಲ್ಲಿ ಬೇಯಿಸಿಕೊಂಡರೆ ಪುಂಡಿ ಅಥವಾ ಅಕ್ಕಿ ತರಿಯ ಕಡುಬು ಸವಿಯಲು ಸಿದ್ದವಾಗುತ್ತದೆ. ಇದು ಖಾರವಾದ ಚಟ್ನಿ ಮತ್ತು ಸಾಂಬಾರ್ ಜೊತೆ ರುಚಿಯಾಗಿರುತ್ತದೆ.