ಬಾಯಿ ಚಪ್ಪರಿಸಕೊಂಡು ತಿನ್ನಬಹುದಾದ ಚಿಕನ್ ಗ್ರೀನ್ ಮಸಾಲಾ

ಶನಿವಾರ, 4 ಆಗಸ್ಟ್ 2018 (15:44 IST)
ಬೆಂಗಳೂರು: ಚಿಕನ್ ಸುಕ್ಕಾ, ಚಿಕನ್ ಸಾರಿನಂತೆ ಚಿಕನ್ ಗ್ರೀನ್ ಮಸಾಲ ಕೂಡ ರುಚಿಯಲ್ಲಿ ಏನೂ ಕಡಿಮೆ ಇಲ್ಲ. ಕಡಿಮೆ ಸಮಯದಲ್ಲಿ ಬೇಗನೆ ಮಾಡಿ ಮುಗಿಸಬಹುದು. ರೊಟ್ಟಿ, ಚಪಾತಿ, ಅನ್ನದ ಜತೆ ಸವಿಯಬಹುದು.


ಬೇಕಾಗಿರುವ ಸಾಮಾಗ್ರಿಗಳು : ಚಿಕನ್‌ - 1ಕೆ.ಜಿ., ತಾಜಾ ಕೊತ್ತಂಬರಿ ಸೊಪ್ಪು - 1ಕಟ್ಟು, ಹಸಿ ಮೆಣಸಿನಕಾಯಿ - 7, ಶುಂಠಿ - 1 1/2 ಇಂಚು, ಬೆಳ್ಳುಳ್ಳಿ - 9 ಎಸಳು, ನೀರುಳ್ಳಿ - 3, ಲವಂಗ – 3, ಚಕ್ಕೆ - 2 ಇಂಚು ಗಾತ್ರದ್ದು, ಕಾಳು ಮೆಣಸು – 5 ಕಾಳು, ಅರಶಿನ ಹುಡಿ - 1/4 ಟೀ ಚಮಚ, ಟೊಮ್ಯಾಟೋ - 3, ಗಸಗಸೆ - 2 ಟೀ ಚಮಚ, ಜೀರಿಗೆ ಕಾಳು - 1/2 ಟೀ ಚಮಚ, ತುಪ್ಪ - 1 ಟೇಬಲ್‌ ಚಮಚ, ರುಚಿಗೆ ಬೇಕಾಗಿರುವಷ್ಟು ಉಪ್ಪು.


ತಯಾರಿಸುವ ವಿಧಾನ 
ಟೊಮ್ಯಾಟೋ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಾನುಗಳನ್ನು ಹದವಾದ ಪೇಸ್ಟ್‌ ರೂಪಕ್ಕೆ ಅರೆದುಕೊಳ್ಳಿ. ಚಿಕನ್‌ ಅನ್ನು ಚೆನ್ನಾಗಿ ತೊಳೆದು ಇಡಿ.

ಒಂದು ಬಾಣಲೆ ತೆಗೆದುಕೊಂಡು ತುಪ್ಪವನ್ನು ಬಿಸಿಮಾಡಿ, ಕತ್ತರಿಸಿದ ಈರುಳ್ಳಿ 1, ಟೊಮ್ಯಾಟೋ ಮತ್ತು ಚಿಕನ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಅರೆದಿಟ್ಟುಕೊಂಡಿರುವ ಮಸಾಲೆಯನ್ನು ಬೆರೆಸಿ ಬಳಿಕ ದಪ್ಪಗಾಗುವ ತನಕ ಚೆನ್ನಾಗಿ ಬೇಯಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ