ರವಾ ಸಿಟ್ಸ್ ತಯಾರಿಸುವುದು ಹೇಗೆ ಗೊತ್ತಾ?

ಮಂಗಳವಾರ, 2 ಜೂನ್ 2020 (08:14 IST)
Normal 0 false false false EN-US X-NONE X-NONE

ಬೆಂಗಳೂರು : ಸಿಟ್ಸ್ ಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಆದಕಾರಣ ಮನೆಯಲ್ಲಿಯೇ ರವಾದಿಂದ ಸುಲಭವಾಗಿ ತಯಾರಾಗುವ ಈ ಸಿಟ್ಸ್ ನ್ನು ಮಾಡಿ ತಿನ್ನಿ.

 

1 ಕಪ್ ರವಾವನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ ಒಂದು ಪಾತ್ರೆಯಲ್ಲಿ 1 ಕಪ್ ಹಾಲು ಹಾಗೂ 4 ಕಪ್ ನೀರು ಹಾಕಿ ಕುದಿಸಿ ಅದಕ್ಕೆ 1 ಚಿಟಿಕೆ ಅರಶಿನ ಹಾಕಿ ಮಿಕ್ಸ್ ಮಾಡಿ ನಂತರ ಅದಕ್ಕೆ ಹುರಿದ ರವಾ ಹಾಕಿ ಕೈಯಾಡಿಸುತ್ತೀರಿ. ಬಳಿಕ ಅದು ಗಟ್ಟಿಯಾಗುತ್ತಿದ್ದಂತೆ ಅದಕ್ಕೆ 1 ಕಪ್ ಸಕ್ಕರೆ, ½ ಕಪ್ ತುಪ್ಪ ಹಾಕಿ ಮಿಕ್ಸ್  ಮಾಡಿ, ಮತ್ತೆ ಅದಕ್ಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣವನ್ನು ಗಟ್ಟಿಯಾಗುವವರೆಗೂ ಬಿಸಿ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಗೆ ಸುರಿದು ಮೇಲೆ ಡ್ರೈಪ್ರೂಟ್ಸ್ ಗಳನ್ನು ಹಾಕಿ. 15 ನಿಮಿಷ ಬಿಟ್ಟು ಅದನ್ನು ಬೇಕಾದ ಆಕಾರಕ್ಕೆ ಕಟ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ