ಗೋರಿಕಾಯಿ ಪಚ್ಚಡಿ

ಬುಧವಾರ, 13 ಮಾರ್ಚ್ 2019 (14:03 IST)
ಬೇಕಾಗುವ ಪದಾರ್ಥಗಳು:
ಗೋರಿಕಾಯಿ ಅರ್ಧ ಕೆಜಿ
ಹಸಿಮೆಣಸಿನಕಾಯಿ 7-8
ಈರುಳ್ಳಿ - 2
ಹಸಿಕೊಬ್ಬರಿ - ಸಣ್ಣ ಕಪ್‌ನಷ್ಟು
ಕೊತ್ತಬಂಕಿ ಬೀಜ - 2 ಟೀಸ್ಪೂನ್
ಜೀರಿಗೆ - 1 ಟೀಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಅರಿಶಿಣ
 
ಮಾಡುವ ವಿಧಾನ: ಮೊದಲಿಗೆ ಗೋರಿಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು, ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ, ಕೊಬ್ಬರಿ, ಕೊತ್ತಂಬರಿ ಬೀಜ. ಜೀರಿಗೆ ಎಲ್ಲವನ್ನೂ ಸೇರಿ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲಿಯಲ್ಲಿ ಸಾಸಿವೆ ಒಗ್ಗರಣೆ ಮಾಡಿಕೊಂಡು ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳ ಮಿಶ್ರಣವನ್ನು ಹಾಕಿ ಜೊತೆಗೆ ಉಪ್ಪು ಸೇರಿಸಿ ಅಗತ್ಯವಿರುವಷ್ಟು ನೀರು ಬೆರಿಸಿ 10-15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಬೇಕು. ಇದು ಪಲ್ಯದ ಹದಕ್ಕಿಂತಲೂ ಸ್ವಲ್ಪ ನೀರಾಗಿರಬೇಕು. ಹೀಗೆ ಮಾಡಿದ ಗೋರಿಕಾಯಿ ಪಚ್ಚಡಿಯು ಚಪಾತಿಗೆ ಹೇಳಿ ಮಾಡಿಸಿದ ಕಾಂಬಿನೇಷನ್. ಬಿಸಿ ಅನ್ನಕ್ಕೂ ಚೆನ್ನಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ