ಆಲೂಗಡ್ಡೆಯಿಂದ ಆಲೂ ಕರಿ, ಆಲೂ ಪಲ್ಯ, ಗ್ರೇವಿ ಹೀಗೆ ತರತರಹದ ಖಾದ್ಯಗಳನ್ನು ತಯಾರಿಸುತ್ತೇವೆ. ಅದರೆ ಅಲೂಗಡ್ಡೆಯಿಂದ ಉಪ್ಪಿನಕಾಯಿಯನ್ನು ತಯಾರಿಸುವ ವಿಧಾನ ಹಲವರಿಗೆ ತಿಳಿದಿರಲಿಕ್ಕಿಲ್ಲ.. ಹಾಗಾದ್ರೆ ಆಲೂಗಡ್ಡೆ ಉಪ್ಪಿನಕಾಯಿ ಮಾಡೋದು ಹೇಗೆ ಎಂದು ಹೇಳುತ್ತೀವಿ.. ಒಮ್ಮೆ ಟ್ರೈ ಮಾಡಿ ನೋಡಿ.....
ಮೊದಲು ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ಇಡಬೇಕು. ನಂತರ ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಚಿಕ್ಕ ಬಾಣಲೆಯಲ್ಲಿ 4 ರಿಂದ 5 ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮೆಂತೆ, ಸಾಸಿವೆ ಹುರಿದು ಹುಣಸೆ ಹುಳಿಯನ್ನು ಸೇರಿಸಿ ಮಾಡಿದ ಪೇಸ್ಟ್ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಬೇಕು. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಹಾಕಿ 5 ರಿಂದ 6 ನಿಮಿಷ ಹುರಿಯಬೇಕು. ನಂತರ ಗ್ಯಾಸ್ ಆಫ್ ಮಾಡಿ ಅದು ತಣ್ಣಗಾಗಲು ಬಿಡಬೇಕು. ಆಗ ರುಚಿಕರವಾದ ಆಲೂಗಡ್ಡೆ ಉಪ್ಪಿನಕಾಯಿ ತಿನ್ನಲು ಸಿದ್ಧ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..