ಹಲವು ರೋಗಗಳಿಗೆ ರಾಮಬಾಣ ಕರಿಬೇವು

ಅತಿಥಾ

ಗುರುವಾರ, 28 ಡಿಸೆಂಬರ್ 2017 (12:46 IST)
ಒಗ್ಗರಣೆ ಎಂದ ಕೂಡಲೇ ನಮಗೆ ನೆನಪಾಗುವುದು ಕರಿಬೇವು. ಕರಿಬೇವು ಇಲ್ಲದ ಒಗ್ಗರಣೆ ಎಂದಿಗೂ ಪೂರ್ಣವಾಗುವುದಿಲ್ಲ. ಆದರೆ ಕೆಲವರಿಗೆ ಕರಿಬೇವು ಎಂದ ತಕ್ಷಣ ಮುಗು ಮುರಿಯುತ್ತಾರೆ. ಆದರೆ ಇದು ಅಡುಗೆಗೆ ಮಾತ್ರವಲ್ಲ ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ  ಅದು ಹೇಗೆ ಅಂತಾ ನಾವು ತಿಳಿಸಿಕೊಡ್ತೀವಿ ಓದಿ.
1. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ
ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಅಂಶ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಇದರ ಉಲ್ಲೇಖವಿದ್ದು ಇದು ದೇಹದಲ್ಲಿರುವ ಪಿತ್ತದ ಅಂಶವನ್ನು ಸಹ ಇದುಶಮನಗೊಳಿಸುತ್ತದೆ.
 
2. ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ
ದೇಹದಲ್ಲಿನ ಪೋಷಕಾಂಶಗಳ ಕೊರತೆಯಿಂದ ತಲೆ ಕೂದಲು ಬಿಳಿಯಾಗುವುದನ್ನು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಬಿಳಿ ಕೂದಲು ಆಗುವುದನ್ನು ತಡೆಗಟ್ಟುವುದರೊಂದಿಗೆ ಕೂದಲು ಬೆಳವಣಿಗೆಗೆ ಸಹಾಯಕಾರಿಯಾಗಿದೆ.
 
3. ಅತಿಸಾರದ ಲಕ್ಷಣಗಳನ್ನು ನಿವಾರಿಸುತ್ತದೆ
ಕರಿಬೇವಿನಲ್ಲಿ ಕಾರ್ಬಜೋಲ್ ಅಲ್ಕಾಲೋಯ್ಡ್ ಅಂಶವಿದ್ದು ಇದು ಅತಿಸಾರಕ್ಕೆ ಉತ್ತಮ ಮದ್ದಾಗಿದೆ.
 
4 ಮಧುಮೇಹ ನಿವಾರಕ
ಮಧುಮೇಹಿಗಳಿಗೆ ಇದು ತುಂಬಾನೇ ಒಳ್ಳೆಯದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಪ್ರಮಾಣ ನಮ್ಮ ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಿಸಿ ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.
 
5. ರಕ್ತಹೀನತೆಯನ್ನು ಹೋಗಲಾಡಿಸುತ್ತದೆ
ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸಿ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ.
 
ಅಲ್ಲದೇ ಕರಿಬೇವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದರೊಂದಿಗೆ ಚರ್ಮದ ಕಾಂತಿಗೂ ಇದು ಸಹಾಯಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ