ಮೊದಲು ಕ್ಯಾಪ್ಸಿಕಮ್ ಅನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಮತ್ತು ಕ್ಯಾರೆಟ್ ಅನ್ನು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದು ಕಾದ ಮೇಲೆ ಹೆಚ್ಚಿಟ್ಟ ಕ್ಯಾಪ್ಸಿಕಮ್ ಮತ್ತು ಕ್ಯಾರೆಟ್ ಅನ್ನು ಹಾಕಿ 5 ನಿಮಿಷ ಫ್ರೈ ಮಾಡಬೇಕು. ನಂತರ ಸ್ವಲ್ಪ ನೀರು, ಉಪ್ಪು, ಕಿಚನ್‌ಕಿಂಗ್ ಮಸಾಲಾ, ಅಚ್ಚ ಖಾರದ ಪುಡಿ ಹಾಕಿ ಬೇಯಿಸಬೇಕು. ಅದು ಅರ್ಧ ಬೆಂದರೆ ಸಾಕು. ನಂತರ ಇದು ಬಿಸಿ ಕಮ್ಮಿ ಆದ ಮೇಲೆ ಗೋಧಿ ಹಿಟ್ಟನ್ನು ಸೇರಿಸಿ ಚಪಾತಿಯ ಹಿಟ್ಟನ್ನು ಕಲೆಸಬೇಕು. ನಂತರ ಉಂಡೆ ಮಾಡಿಕೊಂಡು ಎಣ್ಣೆ ಸವರಿಕೊಂಡ ಪ್ಲಾಸ್ಟಿಕ್ ಮೇಲೆ ಚಪಾತಿಯನ್ನು ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಮೀಡಿಯಮ್ ಉರಿಯಲ್ಲಿ ಬೇಯಿಸಬೇಕು. ಆದರೆ ಬೇಯಿಸುವಾಗ ಸ್ವಲ್ಪ ಎಣ್ಣೆಯನ್ನು ಹಾಕಬೇಕು. ಈಗ ಬಿಸಿ ಬಿಸಿಯಾದ ರುಚಿ ರುಚಿಯಾದ ಕ್ಯಾರೆಟ್ ಕ್ಯಾಪ್ಸಿಕಮ್ ಚಪಾತಿ ಸವಿಯಲು ಸಿದ್ಧ. ಇದನ್ನು ಹಾಗೆಯೇ ತಿನ್ನಲೂ ರುಚಿಯಾಗಿರುತ್ತದೆ ಅಥವಾ ಚಟ್ನಿ ಜೊತೆಯಲ್ಲಿಯೂ ತಿನ್ನಬಹುದು.