ಬೆಳಿಗ್ಗಿನ ತಿಂಡಿಗೆ ರುಚಿಯಾದ ಹೆಸರುಬೇಳೆ ಕಿಚಡಿ!

ಗುರುವಾರ, 31 ಮೇ 2018 (12:20 IST)
ಬೆಂಗಳೂರು: ಹೆಸರುಬೇಳೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಹೆಸರುಬೇಳೆಯಿಂದ ತಯಾರಿಸುವ ಕಿಚಡಿ ಕೂಡ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಸುಲಭವಾಗಿ ತಯಾರಾಗುವ ಹೆಸರುಬೇಳೆ ಕಿಚಡಿ ಇಲ್ಲಿದೆ ನೋಡಿ ಮಾಡಿ. ಸವಿಯಿರಿ.


ಬಾಸುಮತಿ ಅಕ್ಕಿ - 1/2 ಕಪ್ ಹೆಸರುಬೇಳೆ - 1/2 ಕಪ್ ಇಂಗು - 1/4 ಟೀಚಮಚ ರುಚಿಗೆ ತಕ್ಕಷ್ಟು ಉಪ್ಪು ಅರಿಶಿನ ಪುಡಿ - 1 ಟೀಚಮಚ ತುಪ್ಪ - 1 ಟೀಚಮಚ ಜೀರಿಗೆ - 1 ಟೀಚಮಚ ಜೀರಿಗೆ ಪುಡಿ - 1 ಟೀಚಮಚ.

ಒಂದು ಪಾತ್ರೆಗೆ ಬಾಸುಮತಿ ಅಕ್ಕಿ, ಹೆಸರುಬೇಳೆ ಹಾಕಿ. ಇವೆರಡನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಪಕ್ಕದಲ್ಲಿಡಿ. ಬಿಸಿಯಾದ ಕುಕ್ಕರ್‌ಗೆ ತುಪ್ಪವನ್ನು ಹಾಕಿರಿ. ಜೀರಿಗೆ ಹಾಗೂ ಇಂಗನ್ನು ಹಾಕಿ ಹುರಿಯಿರಿ. ನಂತರ ತೊಳೆದುಕೊಂಡ ಹೆಸರು ಬೇಳೆ ಮತ್ತು ಅಕ್ಕಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಅರಿಶಿನ ಪುಡಿ ಮತ್ತು ಜೀರಿಗೆ ಪುಡಿಯನ್ನು ಸೇರಿಸಿ. ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ. ರುಚಿಗೆ ತಕ್ಕಷ್ಟು  ಉಪ್ಪನ್ನು ಸೇರಿಸಿ, ಎರಡು ನಿಮಿಷದವರೆಗೆ  ಬೇಯಲು ಬಿಡಿ. ಕುಕ್ಕರ್ ಗೆ ಮುಚ್ಚಳ ಮುಚ್ಚಿ, ಸುಮಾರು 4 ಸೀಟಿ ಕೂಗಿಸಿ. ಹೀಗೆ ಮಾಡಿದರೆ ರುಚಿಯಾದ ಹೆಸರುಬೇಳೆ ಕಿಚಡಿ ರೆಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ