ವೆನಿಲ್ಲಾ ಕಸ್ಟರ್ಡ್

ಶನಿವಾರ, 27 ಅಕ್ಟೋಬರ್ 2018 (16:05 IST)
ಬೇಸಿಗೆ ಬಂದರೆ ನಮಗೆ ನೆನಪಾಗುವುದು ತಂಪಾದ ಪಾನೀಯಗಳು ಅಥವಾ ಐಸ್‌ಕ್ರೀಂಗಳು. ಅದರಲ್ಲಿಯೂ ಮನೆಯಲ್ಲಿಯೇ ನಾವೇ ಅದನ್ನು ತಯಾರಿಸಿ ತಿನ್ನುವ ರುಚಿಯೇ ಬೇರೆ. ವೆನಿಲ್ಲಾ ಕಸ್ಟರ್ಡ್ ಅನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಹೇಗೆ ಅಂತಾ ತಿಳಿಸಿಕೊಡ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ. 
ತಯಾರಿಸಲು ಬೇಕಾಗುವ ಸಾಮಗ್ರಿಗಳು :
 
* ಹಾಲು 1 ಕಪ್
* ಸಕ್ಕರೆ 2 ರಿಂದ 3 ಕಪ್
* ವಿಪ್ಪಡ್ ಕ್ರೀಮ್ 1 ಕಪ್
* ಬ್ರೆಡ್ 5 ರಿಂದ 6 ಪೀಸ್
* ಮೊಟ್ಟೆ 2 
* ವೆನಿಲ್ಲಾ ಎಸೆನ್ಸ್ 1 ಚಮಚ
* ಕಸ್ಟರ್ಡ್ ಪುಡಿ 4 ಚಮಚ (ಕಸ್ಟರ್ಡ್ ಪುಡಿಯು ವೆನಿಲ್ಲಾ ಫ್ಲೇವರ್‌ನಲ್ಲಿದ್ದರೆ ಎಸೆನ್ಸ್‌ನ ಅಗತ್ಯವಿರುವುದಿಲ್ಲ)
 
ತಯಾರಿಸುವ ವಿಧಾನ :
 
ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಅದಕ್ಕೆ ಸಕ್ಕರೆ ಮತ್ತು ಕ್ರೀಮ್ ಅನ್ನು ಹಾಕಿ ಮಿಕ್ಸ್ ಮಾಡಬೇಕು. ನಂತರ ಬ್ರೆಡ್‌ನ ಕೊನೆಯ ಭಾಗವನ್ನು ತೆಗೆದು ಅದರ ಬಿಳಿ ಭಾಗವನ್ನು ಮಾತ್ರ ಹಾಲಿನ ಜೊತೆ ಮಿಕ್ಸ್ ಮಾಡಬೇಕು. ನಂತರ ಈ ಮಿಶ್ರಣಕ್ಕೆ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕದಡಬೇಕು. ನಂತರ ಇದನ್ನು ಗ್ಯಾಸ್ ಮೇಲೆ ಇಟ್ಟು ಮೊಟ್ಟೆಯ ಹಸಿ ವಾಸನೆ ಹೋಗುವ ತನಕ ಬಿಸಿ ಮಾಡಬೇಕು. ಇದನ್ನು ಸೌಟ್‌ನಿಂದ ತಿರುಗಿಸುತ್ತಲೇ ಇರಬೇಕು. ನಂತರ ಇದಕ್ಕೆ ಕಸ್ಟರ್ಡ್ ಪುಡಿಯನ್ನು ಸೇರಿಸಿ 2 ನಿಮಿಷ ಬಿಸಿ ಮಾಡಬೇಕು. ನಂತರ ವೆನಿಲ್ಲಾ ಎಸೆನ್ಸ್ ಅನ್ನು ಸೇರಿಸಬೇಕು. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದು ತಣ್ಣಗಾಗಲು ಬಿಡಬೇಕು. ಅದನ್ನು ಒಂದು ರಾತ್ರಿ ಫ್ರಿಡ್ಜ್‌ನಲ್ಲಿ ಇಡಬೇಕು. ಮಾರನೆಯ ದಿನ ವೆನಿಲ್ಲಾ ಕಸ್ಟರ್ಡ್ ಸವಿಯಲು ಸಿದ್ಧವಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ