ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲು ಅಥ್ಲೆಟ್ ಗೆ ರಾಹುಲ್ ದ್ರಾವಿಡ್ ನೆರವಾಗಿದ್ದು ಹೇಗೆ?!
ಭಾನುವಾರ, 2 ಸೆಪ್ಟಂಬರ್ 2018 (08:30 IST)
ನವದೆಹಲಿ: ಇದು ಅಚ್ಚರಿಯೆನಿಸಬಹುದು. ಆದರೂ ನಿಜ. ಭಾರತ ಎ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಗೂ ಅಥ್ಲೆಟಿಕ್ಸ್ ಗೂ ಏನು ಸಂಬಂಧ ಎಂದು ನೀವು ಕೇಳಬಹುದು.
ಆದರೆ ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಖ್ಯಾತಿಯಾಗಿರುವ ದ್ರಾವಿಡ್ ಸ್ವಪ್ನ ಬರ್ಮನ್ ಎಂಬ ಹೆಪ್ಟಥ್ಲಾನ್ ಪ್ರತಿಭೆ ಈ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆಲ್ಲಲು ಸಹಾಯ ಮಾಡಿದ್ದಾರೆ ಎಂದರೆ ನೀವು ನಂಬಲೇ ಬೇಕು. ಅದು ಹೇಗೆ ಅಂತೀರಾ?
ರಾಹುಲ್ ದ್ರಾವಿಡ್ ಗೋ ಸ್ಪೋರ್ಟ್ಸ್ ಮತ್ತು ರಾಹುಲ್ ದ್ರಾವಿಡ್ ಅಥ್ಲೆಟ್ ಮೆಂಟರ್ ಶಿಪ್ ಯೋಜನೆಯ ಸಹಯೋಗದೊಂದಿಗೆ ಗ್ರಾಮೀಣ ಭಾಗದ ಅಥ್ಲೆಟಿಕ್ ಪ್ರತಿಭೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರಿಗೆ ತರಬೇತಿ, ಆರ್ಥಿಕ ನೆರವು ನೀಡುತ್ತಿದ್ದಾರೆ.
ಅದೇ ರೀತಿ ಸ್ವಪ್ನ ಕೂಡಾ ರಾಹುಲ್ ದ್ರಾವಿಡ್ ರ ಈ ಯೋಜನೆಯ ಪ್ರಯೋಜನ ಪಡೆದು ಆರ್ಥಿಕ ಸಹಾಯ ಮತ್ತು ತರಬೇತಿ ಪಡೆದು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ. ಒಂದು ವೇಳೆ ದ್ರಾವಿಡ್ ಸಹಾಯವಿಲ್ಲದೇ ಹೋಗಿದ್ದರೆ ಈಕೆ ಪದಕ ಬಿಡಿ ಏಷ್ಯನ್ ಗೇಮ್ಸ್ ಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲವಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.