ಪುರುಷರ ಬಳಿಕ ಮಹಿಳೆಯರ ಸರದಿ: ಹಾಕಿ ಸೆಮಿಫೈನಲ್ ಗೆ ಭಾರತ

ಸೋಮವಾರ, 2 ಆಗಸ್ಟ್ 2021 (10:13 IST)
ಟೋಕಿಯೋ: ಪುರುಷರ ಬಳಿಕ ಇದೀಗ ಭಾರತ ವನಿತೆಯರ ಹಾಕಿ ತಂಡವೂ ಸೆಮಿಫೈನಲ್ ಗೆ ತಲುಪಿದೆ. ಆಸ್ಟ್ರೇಲಿಯಾ ವಿರುದ್ಧ 1-0 ಅಂತರದಿಂದ ಗೆದ್ದು ಮೊದಲ ಬಾರಿಗೆ ಸೆಮಿಫೈನಲ್ ಗೆ ತಲುಪಿದೆ.


ನಿನ್ನೆಯಷ್ಟೇ ಪುರುಷರ ಹಾಕಿ ತಂಡ 41 ವರ್ಷಗಳ ಬಳಿಕ ಹಾಕಿ ಸೆಮಿಫೈನಲ್ ಗೆ ತಲುಪಿ ಇತಿಹಾಸ ಬರೆದಿತ್ತು. ಇದೀಗ ಮಹಿಳೆಯರೂ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಭಾರತದ ಪರ ಗುರುಜಿತ್ ಕೌರ್ 22 ನೇ ನಿಮಿಷದಲ್ಲಿ ಗೋಲು ಹೊಡೆದಿದ್ದರು. ಇದೀಗ ಭಾರತ ತಂಡ ವಿಶ್ವ ನಂ.2 ಅರ್ಜೈಂಟೀನಾ ತಂಡವನ್ನು ಸೆಮಿಫೈನಲ್ ನಲ್ಲಿ ಎದುರಿಸಲಿದೆ.

ಆರಂಭಿಕ ಲೀಗ್ ಪಂದ್ಯದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಮಹಿಳೆಯರು ಬಳಿಕ ಫೀನಿಕ್ಸ್ ನಂತೆ ಎದ್ದು ಬಂದಿದ್ದು, ಹೊಸ ಭರವಸೆ ಮೂಡಿಸಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಮೂರು ಬಾರಿಯ ಚಾಂಪಿಯನ್ ತಂಡವಾಗಿರುವ ಆಸ್ಟ್ರೇಲಿಯಾವನ್ನು ಒಂದೂ ಗೋಲು ಹೊಡೆಯಲು ಬಿಡದೇ ಭರ್ಜರಿಯಾಗಿ ಸೋಲಿಸಿದ್ದು ಸಾಧನೆಯೇ ಸರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ