ಭಾರತಕ್ಕೆ ಸಿಕ್ಕ ಹೊಸ ಬ್ಯಾಡ್ಮಿಂಟನ್ ಸ್ಟಾರ್ ಲಕ್ಷ್ಯ ಸೇನ್

ಮಂಗಳವಾರ, 9 ಆಗಸ್ಟ್ 2022 (09:00 IST)
ನವದೆಹಲಿ: ಈ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮತ್ತೊಬ್ಬ ಭರವಸೆಯ ತಾರೆ ಸಿಕ್ಕಿದ್ದಾರೆ. ಅದು ಲಕ್ಷ್ಯ ಸೇನ್ ಮೂಲಕ.

20 ವರ್ಷದ ಉತ್ತರಾಖಂಡದ ಲಕ್ಷ್ಯ ಸೇನ್ ಹಾಲಿ ಶ್ರೇಯಾಂಕ ಪಟ್ಟಿಯಲ್ಲಿ 10 ನೇ ಸ್ಥಾನ ಹೊಂದಿದ್ದಾರೆ. ಈ ಕಾಮನ್ ವೆಲ್ತ್ ಗೇಮ್ಸ್ ಗೆ ಮೊದಲು ಲಕ್ಷ್ಯ ಸೇನ್ ಪರಿಚಯ ಅಷ್ಟಾಗಿ ಭಾರತೀಯ ಕ್ರೀಡಾ ಪ್ರೇಮಿಗಳಿಗಿರಲಿಲ್ಲ.

ಆದರೆ ಈ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅವರು ಫೈನಲ್ ತಲುಪಿದ ಹಾದಿ, ಫೈನಲ್ ನಲ್ಲಿ ಜಿದ್ದಾಜಿದ್ದಿನ ಫೈಟ್ ನೀಡಿದ ರೀತಿ ಮುಂದೊಂದು ಅವರು ಭಾರತದ ಬ್ಯಾಡ್ಮಿಂಟನ್ ಗೆ ದೊಡ್ಡ ಆಸ್ತಿಯಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಖ್ಯಾತ ಕೋಚ್ ಯೋ ಯಂಗ್ ಸಂಗ್ ಅವರ ಕೋಚಿಂಗ್ ನಲ್ಲಿ  ಪಳಗುತ್ತಿರುವ ಲಕ್ಷ್ಯ ಸೇನ್ ಪಕ್ಕನೇ ಪಂದ್ಯ ಬಿಟ್ಟುಕೊಡುವ ಜಾಯಮಾನದವರಲ್ಲ ಎಂಬುದು ಕಾಮನ್ ವೆಲ್ತ್ ಗೇಮ್ಸ್ ಫೈನಲ್ ಪಂದ್ಯದಿಂದ ಜಾಹೀರಾಗಿದೆ.

ಲಕ್ಷ್ಯ ಸೇನ್ ಕುಟುಂಬದಲ್ಲೇ ಕ್ರೀಡಾ ಪರಂಪರೆಯಿದೆ. ತಂದೆ ಡಿ.ಕೆ. ಸೇನ್ ಕೋಚ್ ಆಗಿ ಕೆಲಸ ಮಾಡಿದ್ದರೆ ಅಣ್ಣ ಚಿರಾಗ್ ಸೇನ್ ಕೂಡಾ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಟಂನ್ ಪ್ಲೇಯರ್. ಹೀಗಾಗಿ ರಕ್ತದಲ್ಲೇ ಅವರಿಗೆ ಬ್ಯಾಡ್ಮಿಂಟನ್ ಕಲೆ ಕರಗತವಾಗಿದೆ. ಪದಕದ ಜೊತಗೆ ಈ ಬಾರಿ ಲಕ್ಷ್ಯ ಭಾರತದ ಹೊಸ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ