ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದ ಕುಸ್ತಿಪಟು ವಿನೇಶಗೆ ಸೆಮಿಫೈನಲ್‌ಗೆ ಪ್ರವೇಶ

Sampriya

ಮಂಗಳವಾರ, 6 ಆಗಸ್ಟ್ 2024 (16:34 IST)
Photo Courtesy X
ಬೆಂಗಳೂರು: ಭಾರತದ ಅನುಭವಿ ಕುಸ್ತಿಪಟು ವಿನೇಶ ಫೋಗಟ್ ಒಲಿಂಪಿಕ್ಸ್‌ ಮಹಿಳೆಯರ 50ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದು ಈ ಮೂಲಕ ಭಾರತಕ್ಕೆ ಪದಕ ನಿರೀಕ್ಷಿಸಬಹುದು..

ಮಂಗಳವಾರ ನಡೆದ ಆರಂಭಿಕ ಕುಸ್ತಿ ಪಂದ್ಯದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮತ್ತು ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿ ಅವರಿಗೆ 3-2 ರಿಂದ ಆಘಾತ ನೀಡಿದ ವಿನೇಶ ಅವರು ಕ್ವಾಟರ್‌ ಫೈನಲ್ ಪ್ರವೇಶಿಸಿದ್ದರು.

ಬಳಿಕ ನಡೆದ ಕ್ವಾಟರ್‌ ಫೈನಲ್ ಪಂದ್ಯದಲ್ಲಿ ಭಾರತದ ಕುಸ್ತಿ ತಾರೆ ವಿನೇಶ ಉಕ್ರೇನ್‌ನ ಎಂಟನೇ ಶ್ರೇಯಾಂಕಿತ ಕುಸ್ತಿಪಟು ಒಕ್ಸಾನಾ ಲಿವಾಚ್ ಅವರನ್ನು 7-5ರಿಂದ ಸೋಲಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ