ಕ್ವಾಟರ್‌ ಫೈನಲ್‌ಗೆ ಮಹಿಳಾ ಟೇಬಲ್ ಟೆನ್ನಿಸ್ ತಂಡ: ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ದಾಖಲೆ

Sampriya

ಸೋಮವಾರ, 5 ಆಗಸ್ಟ್ 2024 (17:47 IST)
Photo Courtesy X
ಪ್ಯಾರಿಸ್: ಭಾರತದ ಟೇಬಲ್ ಟೆನಿಸ್  ಮಹಿಳಾ ತಂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದೆ. ಸೋಮವಾರ ನಡೆದ ಪ್ರೀ ಕ್ವಾಟರ್ ಫೈನಲ್‌ನಲ್ಲಿ 3-2ರಿಂದ ರೊಮೇನಿಯಾ ತಂಡವನ್ನು ಹಿಮ್ಮೆಟ್ಟಿಸಿ ಸೋಲಿಸಿ, ಕ್ವಾಟರ್ ಫೈನಲ್ ಪ್ರವೇಶಿಸಿದೆ.

ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಸ್ಪರ್ಧೆ ನಡೆಸುತ್ತಿರುವ ಭಾರತ ತಂಡವನ್ನು ಶ್ರೀಜಾ ಅಕುಲಾ, ಅರ್ಚನಾ ಗಿರೀಶ್ ಕಾಮತ್ ಮತ್ತು ಮಣಿಕಾ  ಬಾತ್ರಾ ಮುನ್ನಡೆಸಿದರು. ಆರಂಭದ ಡಬಲ್ಸ್‌ ಸುತ್ತಿನಲ್ಲಿ ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ 11-9 12-10 11-7 ರೊಮೇನಿಯಾದ ಡಯಾಕೊನು ಮತ್ತು ಎಲಿಜಬೆಟಾ ಜೋಡಿಯನ್ನು ಮಣಿಸಿತು.

ನಂತರ ನಡೆದ ಸಿಂಗಲ್ಸ್‌ ಸುತ್ತಿನಲ್ಲಿ ಮಣಿಕಾ ಅವರು 11-5 11-7 11-7 ಗೆಲುವಿನಲ್ಲಿ ಉನ್ನತ ಶ್ರೇಯಾಂಕದ ಬರ್ನಾಡೆಟ್ ಸ್ಜೋಕ್ಸ್ ಅವರನ್ನು ಸೋಲಿಸಿ ತಂಡದ ಅಂತರವನ್ನು  2-0 ಮುನ್ನಡೆಗೆ ತಂದಿಟ್ಟರು.

ಆದರೆ ಎರಡನೇ ಮತ್ತು ಮೂರನೇ ಸಿಂಗಲ್ಸ್‌ನಲ್ಲಿ ಕ್ರಮವಾಗಿ  ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಸೋಲು ಕಂಡರು. ಆರಂಭದಲ್ಲಿ ಗೇಮ್‌ಗಳನ್ನು ಗೆದ್ದರು ನಂತರ ಎದುರಾಳಿಗಳಿಗೆ ಶರಣಾದರು. ಹೀಗಾಗಿ ತಂಡಗಳ ಸ್ಕೋರ್ 2-2ಕ್ಕೆ ಸಮಬಲಗೊಂಡಿತು.

ಹೀಗಾಗಿ ನಡೆದ ನಿರ್ಣಾಯಕ ಸುತ್ತಿನತ್ತ ಪಂದ್ಯ ಸಾಗಿತು. ಮಣಿಕಾ ಮತ್ತೇ ಕಣಕ್ಕಿಳಿದು ಅದೀನಾ ಅವರನ್ನು 3-0 (11-5 11-9 11-9) ಅಂತರದಿಂದ ಸೋಲಿಸಿ ಭಾರತವನ್ನು ಗೆಲುವಿನತ್ತ ಸಾಗಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಅಮೆರಿಕ ಅಥವಾ ಜರ್ಮನಿ ವಿರುದ್ಧ ಸೆಣಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ