ಪ್ಯಾರಿಸ್ ಒಲಿಂಪಿಕ್ಸ್ 2024: ಗೋಲ್ಡನ್ ಬಾಯ್ ನೀರಜ್ ಚೋಪ್ರಾ ನೀನಾದ್ರೂ ನಮ್ಮ ಕನಸು ನೆರವೇರಿಸಪ್ಪ ಅಂತಿದ್ದಾರೆ ಫ್ಯಾನ್ಸ್

Krishnaveni K

ಮಂಗಳವಾರ, 6 ಆಗಸ್ಟ್ 2024 (09:07 IST)
ಪ್ಯಾರಿಸ್: ಒಲಿಂಪಿಕ್ಸ್ 2024 ರಲ್ಲಿ ಭಾರತೀಯರು ಬಹು ನಿರೀಕ್ಷೆ ಮಾಡಿಕೊಂಡಿದ್ದ ಕ್ರೀಡಾಪಟುಗಳೆಲ್ಲರೂ ನಿರಾಸೆ ಮಾಡಿದ್ದಾರೆ. ಆದರೆ ಇಂದು ನೀರಜ್ ಚೋಪ್ರಾ ಮೇಲೆ ಎಲ್ಲರ ನಿರೀಕ್ಷೆಯಿದೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಂದು ಭಾರತದ ಜ್ಯಾವೆಲಿನ್ ಥ್ರೋ ಸ್ಟಾರ್ ನೀರಜ್ ಚೋಪ್ರಾ ಕಣಕ್ಕಿಳಿಯುತ್ತಿದ್ದಾರೆ. ನೀರಜ್ ಚೋಪ್ರಾ ಕಳೆದ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಹೀರೋ ಆದವರು. ಅದಾದ ಬಳಿಕ ಏಷ್ಯನ್ ಗೇಮ್ಸ್ ನಲ್ಲೂ ಚಿನ್ನದ ಪದಕ ಗೆದ್ದಿದ್ದರು.

ಒಟ್ಟಿನಲ್ಲಿ ಭಾರತದ ಗೋಲ್ಡನ್ ಬಾಯ್ ಎಂದೇ ಖ್ಯಾತಿ ಪಡೆದಿದ್ದಾರೆ. ಇದೀಗ ಚಿನ್ನದ ಗುರಿಯೊಂದಿಗೇ ಈ ಒಲಿಂಪಿಕ್ಸ್ ನಲ್ಲೂ ಕಣಕ್ಕಿಳಿಯುತ್ತಿದ್ದಾರೆ. ಈ ಒಲಿಂಪಿಕ್ಸ್ ನಲ್ಲಿ ಭಾರತ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಇದುವರೆಗೆ ಕೇವಲ 3 ಕಂಚಿನ ಪದಕ ಬಂದಿದೆ. ಅದೂ ಎಲ್ಲವೂ ಶೂಟಿಂಗ್ ನಲ್ಲಿಯೇ.

ಬ್ಯಾಡ್ಮಿಂಟನ್, ಆರ್ಚರಿ, ಬಾಕ್ಸಿಂಗ್ ತಾರೆಯರು ಈಗಾಗಲೇ ಸೋತು ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಈಗ ನೀರಜ್ ಮೇಲೆ ಎಲ್ಲರ ನಿರೀಕ್ಷೆಯಿದೆ. ಇಂದು ನೀರಜ್ ಚೋಪ್ರಾ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಅವರ ಈ ಪಂದ್ಯ ಅಪರಾಹ್ನ 3.20 ಕ್ಕೆ ನಡೆಯಲಿದೆ. ಸದ್ಯಕ್ಕೆ ಜ್ಯಾವೆಲಿನ್ ಥ್ರೋ ವಿಭಾಗದಲ್ಲೇ ಅವರ ಸ್ಟ್ರಾಂಗ್ ಸ್ಪರ್ಧಿಯಾಗಿದ್ದಾರೆ. ನೀರಜ್ ಚೋಪ್ರಾ ಚಿನ್ನ ಗೆದ್ದು ತರುತ್ತಾರೆ ಎಂದು ಕೋಟ್ಯಾಂತರ ಭಾರತೀಯರು ನಿರೀಕ್ಷೆಯಿಂದ ನೋಡುತ್ತಿದ್ದು, ನೀನಾದ್ರೂ ನಮ್ಮ ಕನಸು ನೆರವೇರಿಸಪ್ಪಾ ಎನ್ನುತ್ತಿದ್ದಾರೆ ಫ್ಯಾನ್ಸ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ