RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

ಬುಧವಾರ, 24 ಮೇ 2023 (07:06 IST)
ಬೆಂಗಳೂರಿನ ಪೆಟ್ರೋಲ್ ಬಂಕ್ಗಳಲ್ಲಿ 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡವರು ಕೂಡ 2,000 ರೂಪಾಯಿ ನೋಟ್ ನೀಡ್ತಿದ್ದಾರೆ. ಚಿಲ್ಲರೆ ಸಮಸ್ಯೆಯಿಂದ ಬಳಲುತ್ತಿರುವ ಪೆಟ್ರೋಲ್ ಬಂಕ್ ಮಾಲೀಕರು, 1,500 ರೂ. ತೈಲ ಹಾಕಿಸಿಕೊಂಡಲ್ಲಿ ಮಾತ್ರ 2,000 ರೂ. ನೋಟ್ ಸ್ವೀಕರಿಸ್ತೇವೆ ಎಂದು ಬೋರ್ಡ್ ಹಾಕಿದ್ದಾರೆ.
 
ಗೊರಗುಂಟೆಪಾಳ್ಯದ ಪೆಟ್ರೋಲ್ ಬಂಕ್ಗೆ ಸೋಮವಾರ ಒಂದೇ ದಿನ 180 ಪಿಂಕ್ ನೋಟ್ಗಳು ಸಂದಿವೆ. ಬೃಹತ್ ಹೋಟೆಲ್, ರೆಸ್ಟೋರೆಂಟ್, ಬಾರ್ಗಳಲ್ಲಿಯೂ ಪಿಂಕ್ನೋಟ್ ಸದ್ದು ಮಾಡುತ್ತಿದೆ.

ಈ ಮಧ್ಯೆ, ಯಾವುದೇ ಗುರುತಿನ ಚೀಟಿ ಪಡೆಯದೇ 2,000 ರೂ. ನೊಟುಗಳ ವಿನಿಮಯಕ್ಕೆ ಅವಕಾಶ ನೀಡಿರೋದನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಅಶ್ವಿನಿ ಉಪಧ್ಯಾಯ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಬ್ಯಾಂಕುಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳುವಾಗ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಪರಿಗಣಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ