ಕಾಂಗ್ರೆಸ್‍ನಲ್ಲಿ ಯಾರಾಗ್ತಾರೆ ಮುಖ್ಯಮಂತ್ರಿ..?

ಭಾನುವಾರ, 14 ಮೇ 2023 (09:56 IST)
ಬೆಂಗಳೂರು : ಚುನಾವಣೆ ಮುಗಿಯಿತು, ಕಾಂಗ್ರೆಸ್ ಗೆದ್ದಾಯ್ತು. ಈಗ ಸಿಎಂ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಹೌದು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರ ನಡುವೆ ಹೈಕಮಾಂಡ್ ಒಗ್ಗಟ್ಟಿನ ಮಂತ್ರ ಪಠಿಸಿದೆ. ಭಾರತ್ ಜೋಡೋ ಯಾತ್ರೆ ವೇಳೆಯಲ್ಲೂ ರಾಹುಲ್ ಗಾಂಧಿಯವರು ಇಬ್ಬರ ಕೈ ಕೈ ಹಿಡಿಸಿದ್ದರು.

ಚುನಾವಣೆ ಮುಗಿಯುವ ತನಕವೂ ಒಗ್ಗಟ್ಟು ಪ್ರದರ್ಶನ ಮಾಡಿರುವ ಡಿಕೆಶಿ, ಸಿದ್ದರಾಮಯ್ಯ ಚುನಾವಣೆ ದಿನವೂ ಒಟ್ಟಿಗೆ ಪೂಜೆ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಆದರೆ ಇದೀಗ ಅಧಿಕಾರ ಸಿಕ್ಕಾಯ್ತು, ಇಬ್ಬರೂ ಸಿಎಂ ಕುರ್ಚಿಯ ಕನಸು ಕಂಡಿದ್ದಾರೆ. ಇದರಲ್ಲಿ ಯಾರಾದ್ರೂ ಒಬ್ಬರು ತ್ಯಾಗ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇನ್ನೊಂದೆಡೆ ಇಬ್ಬರು ನಾಯಕರನ್ನ ಕೂರಿಸಿ 50:50 ಸೂತ್ರವನ್ನ ಹೈಕಮಾಂಡ್ ಮುಂದಿಡುವ ಸಾಧ್ಯತೆ ಇದ್ದು, ಆ ಸೂತ್ರದಲ್ಲಿ ಮೊದಲು ಸಿಎಂ ಆಗೋರು ಯಾರು..? ಯಾರು ಯಾರಿಗೆ ಸೀಟ್ ಬಿಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ಹೈಕಮಾಂಡ್ ಸೂಚನೆ ಮೇರೆಗೆ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಆಯ್ಕೆ ಮಾಡಲಾಗಿತ್ತು. ಅದೇ ರೀತಿ ಈ ಬಾರಿಯೂ ಎಐಸಿಸಿಯು ಶಾಸಕರ ಬಲಾಬಲದ ಮೇಲೆ ಸಿಎಂ ಆಯ್ಕೆ ಮಾಡುತ್ತಾ, ಇಲ್ಲ ಹೈಕಮಾಂಡ್ ಹೇಳಿದವರೇ ಸಿಎಂ ಅಂತಾ ಸಂದೇಶ ರವಾನಿಸುತ್ತಾ ಎಂಬ ಕುತೂಹಲ ಹುಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ