ಅನುರಾಗ ಏನಾಯ್ತು...
ಮನಸೇಕೆ ಕಲ್ಲಾಯ್ತು...
ನಿನ್ನ ಸವಿ ಮಾತು ಕಹಿ ಏಕಾಯ್ತು...
ನಿನ್ನೊಲವೆಲ್ಲಾ ಇಂದೇನಾಯ್ತು...
ಅನುರಾಗ ಏನಾಯ್ತು...
ಅಣ್ಣಾವ್ರ " ನೀ ನನ್ನ ಗೆಲ್ಲಲಾರೆ ಸಿನಿಮಾದ ಈ ಹಾಡು ಯಾಕೋ ತುಂಬಾನೆ ಕಾಡುತ್ತಿದೆ.
ಪ್ರೀತಿ-ಪ್ರೇಮ ಇದು ಪುರಾಣ ಕಾಲದಿಂದಲೂ ಇರುವಂತದು, ಇನ್ನು ಮುಂದೆ ಕೂಡ ಇರುತ್ತದೆ.
ಪ್ರೇಮವೆಂಬುದು ನಿರಂತರ ಅದಕ್ಕೆ ಅಂತ್ಯ ಏನ್ನುವುದಿಲ್ಲ.
ಹಾಗಾದರೇ ಈ ಪ್ರೀತಿ- ಪ್ರೇಮವೆಲ್ಲಾ ಆಸ್ಮಿಕವಾ ? ಇಲ್ಲ ದೇಹ ವಾಂಛೆಗಳ ವೈಪರೀತ್ಯವಾ ? ಪ್ರೇಮವನ್ನು ನಾವು ಬಾಹ್ಯ ಜಗತ್ತಿಗೆ ತೋರ್ಪಡಿಸಿದ್ದೇ ಆದರೆ ಅದು ವಾಂಛೆಯಾಯಿತು. ಪ್ರೇಮ ಮನದೊಳಗಿನ ಭಾವಗಳಿಗೆ ಅರಿವಿಲ್ಲದೆ ಸ್ಪಂದಿಸುವ password ಇಲ್ಲದ ವೈಫೈ ಇದ್ದಾ ಹಾಗೇ.
ಇಷ್ಟೇಲ್ಲಾ ಯೋಚಿಸಲು ಕಾರಣ ಅವಳು ಹೌದು ಅವಳೇ.
ಅವಳ ಬಗ್ಗೆ ಬರೆದಷ್ಟು ಬತ್ತದ ನೆನಪಿನ ಒರತೆ. ಅವಳ ನೆನಪುಗಳೇ ಹಾಗೇ ಏನೋ ಮನಸ್ಸಿಗೆ ಸಂತಸ. ಇಲ್ಲಿಯವರೆಗೂ ಅವಳ ಬಗ್ಗೆ ಅದೇಷ್ಟು ಗೀಚಿದೇನೋ ಆದರು ಆ ನೆನಪುಗಳದ್ದು ಮುಗಿಯದ ಹಾದಿ. ಅವಳ ಕಾಲ್ಗೆಜ್ಜೆಯ ಸದ್ದು, ಪಟ-ಪಟ ಮಾತನಾಡುವ ಮುಗ್ಧ ಮನಸ್ಸು, ಆ ಚೆಲುವು, ಕುಡಿನೋಟ, ನೋವೆಲ್ಲಾ ಮರೆಸುತ್ತಿದ್ದ ಕಿರುನಗೆ, ಅವಳ ಬಿಸಿಯುಸಿರ ಸ್ಪರ್ಶದಿಂದಾಗುತ್ತಿದ್ದ ರೋಮಾಂಚನ, ಆ ಸಿಹಿ ತುಟಿಯ ಚುಂಬನ ಇದ್ಯಾವುದು ಮರೆತೆನೆಂದರು ಮರೆಯಾಗುತ್ತಿಲ್ಲ. ನಮ್ಮಿಬ್ಬರ ಪ್ರೀತಿಗೆ ಎಲ್ಲೆ ಎನ್ನುವುದಿರಲಿಲ್ಲ.
ಅವಳಿಂದ ನಾನು, ನನ್ನಿಂದ ಅವಳು ಮುಚ್ಚಿ ಇಟ್ಟ ವಿಷಯಗಳೇ ಇಲ್ಲವೇನೋ. ಎಷ್ಟೋ ಬಾರಿ ಹೇಳಲು ಭಯಗೊಂಡು ಮನದಲ್ಲೆ ಅಡಗಿಕೊಂಡಿದ್ದ ಆ ನನ್ನ ಪ್ರೇಮವನ್ನು ಅವಳಿಗೆ ಹೇಳುವುದಾದರು ಹೇಗೆಂದು ಸಾವಿರಾರು ಬಾರಿ ಯೋಚಿಸಿದ್ದಿದೆ. ಒಮ್ಮೆ ಧೈರ್ಯ ಮಾಡಿ ಚಿಕ್ಕದಾಗಿ "ಐ ಲವ್ ಯೂ" ಅನ್ನೊ ಮೆಸಜ್ ಕಳುಹಿಸಿಬಿಟ್ಟಿದ್ದೆ,
ಆದರೆ ಅವಳ ಉತ್ತರ "ನಾಳೆ ಸಿಗು ನೀನು "....????
ಮರುದಿನ ಅವಳ ನೋಡಿ ಎದೆಯ ಡವ-ಡವ !! ಸದ್ದು DJ ಶಬ್ದಕ್ಕೂ ಕಡಿಮೆ ಇಲ್ಲದಂತೆ ಹೊಡೆದುಕೊಳ್ಳಲಾರಂಭಿಸಿತು.
ಆಟೋ ಹತ್ತಿ ಪಿಲಿಕುಳ ಪಾರ್ಕು ಅಂದವಳೇ ನನ್ನ ಎದೆಗಾನಿಸಿ ಕುಳಿತು "ಪುಕ್ಕುಲ ಇವಾಗ ಧೈರ್ಯ ಬಂತೇನೋ ಎಷ್ಟು ಕಾಯ್ತ ಇದ್ದೆ ಆ ಮೂರು ಶಬ್ದಗಳಿಗಾಗಿ ಗೊತ್ತಾ"! ಅಂದಾಗ ಇನ್ನೇನು ಸ್ವರ್ಗಕ್ಕೆ ಒಂದೇ ಮೆಟ್ಟಿಲೆಂಬ ಭಾವ ಅರಿವಿಲ್ಲದೆ ಅವಳ ಹಣೆಯ ಮೇಲೆ ತುಟಿ ಅಚ್ಚೊತ್ತಿತ್ತು!
ಈ ಹುಡುಗಿಯರೇ ಹೀಗೆ ಮನೆ, ತಂದೆ- ತಾಯಿ ಅನ್ನೊ ವಿಷಯ ಬಂದಾಗ ನಂಬಿ ಕೂತ ಹುಡುಗನನ್ನೇ ಒದ್ದು ಬಿಡುತ್ತಾರೆ!!
ಪ್ರೀತಿಗಾಗಿ ಇನ್ನಷ್ಟು ಹಾತೊರೆಯುವ ಮನಸ್ಸು ನನ್ನದಾಗಿದ್ದರೆ, ಅವಳು ಇನ್ನಾರದೋ ಮೂರುಗಂಟಿಗೆ ಕೊರಳಾಗಲು ಸಿದ್ಧಳಾಗುತ್ತಾಳೆ. ನಾನು ಕನಸಲ್ಲಿ ಮುಳುಗಿ ಮುಂದಿನ ಜೀವನಕ್ಕಾಗುವಷ್ಟು ಪ್ರೀತಿ ಸಿಗಲೆಂದು ಕನಸ ಕಟ್ಟಿದರೆ ,
ಅವಳು ಇನ್ನೊಬ್ಬನ ಕಿರು ಬೆರಳಿಗೆ ಗಂಟಾಗುತ್ತಾಳೆ. ಇಲ್ಲ ಅವಳು ಹಾಗಿಲ್ಲ, ನನ್ನ ಬಿಟ್ಟು ಹೋಗಲ್ಲ ಬಂದೇ ಬರುತ್ತಾಳೆ,
ನನ್ನೊಂದಿಗೆ ಬಾಳ ಪಯಣದಿ ಜೊತೆಯಾಗುತ್ತಾಳೆ ಅಂದುಕೊಂಡರೆ ಯಾರದೋ ಸಪ್ತಪದಿಗೆ ಹೆಜ್ಜೆಯಾಗುತ್ತಾಳೆ.
ಪ್ರೇಮದ ಇನ್ನೊಂದು ಮಗ್ಗುಲಿನ ಪರಿಚಯ ಆಗಷ್ಟೇ ಶುರು ಹಚ್ಚಿದೆ !! ದೂರವಾದ ಪ್ರೀತಿಗೆ ಮನಸ್ಸು ಚಡಪಡಿಸುತ್ತಿದೆ. ಅವಳ ಪ್ರೀತಿಯ ಮಾತು, ಬಿಸಿಯುಸಿರ ಸ್ಪರ್ಶ, ಆ ಮುದ್ದಾಟಗಳು, ಜಗಳಗಳು, ತಿರುಗಿದ ದೇವಾಲಯಗಳು,ಕೂತ ಪಾರ್ಕಿನ ಬೆಂಚು ಅವಳ ನೆನಪುಗಳನ್ನೇ ಸಾರಿ ಸಾರಿ ಹೇಳುತ್ತಿವೆ!! ಮನ ಭಾರವಾಗಿ ಮುಗಿಯದ ಕಣ್ಣೀರಿನ ಮೌನವೇ ಉತ್ತರವಾಗುತ್ತಿದೆ.
ದಿನಗಳು ಹೀಗೆ ಉರುಳಿ ಹೋಗಿ ನೀನು ಮತ್ತೆಂದು ಸಿಗಲಾರೇ ಎಂದ ಅರಿತಾಗ ಕಳವಳಗೊಳ್ಳುತ್ತೇನೆ ಕಣೇ.
ಗೊತ್ತು ನಿನಗು ನನ್ನ ಬಿಟ್ಟಿರೋದು ಕಷ್ಟ ಅಂತ.ಯಾವುದೋ ಅನಿವಾರ್ಯ ಕಾರಣಕ್ಕೆ ನಿನ್ನ ಕೈಯಾರೇ ನಮ್ಮ ಸುಂದರ ನಾಳೆಗಳಿಗೆ ಬೆಂಕಿ ಇಟ್ಟುಬಿಟ್ಟೆ ಕಣೇ ನೀನು. ನಿನ್ನ ಕಣ್ಣಲ್ಲಿ ಒಂದು ಹನಿ ನೀರು ಹಾಕಿಸಿದವನಲ್ಲ ಆದರೆ ಜೀವನ ಪೂರ್ತಿ ನಿನ್ನ ನೆನಪಲ್ಲೆ ಕಣ್ಣೀರಾಗೋ ಹಾಗೇ ಮಾಡಿದ್ಯಲ್ಲೆ!!
ಹೇಳು ಅದೇನು ದ್ರೋಹ ಮಾಡಿದ್ದೆ ನಾನು ನಿನಗೆ.ಇನ್ನೊಂದು ಸ್ವಲ್ಪ ಸಮಯ ಕಾದಿದ್ದರೆ ಜೀವನ ಇಡೀ ನಿನಗೆ ಪ್ರೇಮದ ಅಭಿಷೇಕ ಮಾಡ್ತಿದ್ದೆ ಕಣೇ. ಆ ಯೋಗ ನನಗಿಲ್ಲವೋ !?ಇಲ್ಲ ಯೋಗ್ಯತೆ ಇಲ್ಲವೋ !?