ಹುಣಸೆ ಹುಳಿಯ ಫೇಸ್ ಪ್ಯಾಕ್ ಮಾಡೋದು ಹೇಗೆ? ಇಲ್ಲಿ ನೋಡಿ!

ಬುಧವಾರ, 14 ನವೆಂಬರ್ 2018 (09:16 IST)
ಬೆಂಗಳೂರು: ಹುಣಸೆ ಹುಳಿ ಅಡುಗೆ ಮನೆಯಲ್ಲಿ ಮಾತ್ರವಲ್ಲ, ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಹುಣಸೆ ಹುಳಿಯ ಫೇಸ್ ಪ್ಯಾಕ್ ಮಾಡೋದು ಹೇಗೆ ಗೊತ್ತಾ?

ಅದಕ್ಕೆ ಬೇಕಾಗಿರುವುದು ಹುಣಸೆ ರಸ 2 ಚಮಚ, 1 ಚಮಚ ಜೇನು ತುಪ್ಪ, 1 ಚಮಚ ಮೊಸರು, 1 ಚಮಚ ಬಾದಾಮಿ ಎಣ್ಣೆ, 1 ಚಮಚ ರೋಸ್ ವಾಟರ್, ಅರ್ಧ ಚಮಚ ವಿಟಮಿನ್ ಇ ಪೌಡರ್.

ಮೊದಲು ಹುಣಸೆ ರಸ ಮತ್ತು ಮೊಸರನ್ನು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ವಿಟಮಿನ್ ಇ ಪೌಡರ್ ಸೇರಿಸಿಕೊಳ್ಳಿ. ನಂತರ ರೋಸ್ ವಾಟರ್, ಜೇನು ತುಪ್ಪ, ಬಾದಾಮಿ ಎಣ್ಣೆ ಸೇರಿಸಿದರೆ ಹುಣಸೆ ರಸದ ಫೇಸ್ ಪ್ಯಾಕ್ ರೆಡಿ. ಇದನ್ನು ನಿಯಮಿತವಾಗಿ ಬಳಸುತ್ತಿದ್ದರೆ ಮುಖದ ಕಾಂತಿ ಹೆಚ್ಚುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ