ಕಣ್ಣಿನ ಸುತ್ತ ಕಂಡುಬರುವ ಕಪ್ಪು ವರ್ತುಲಕ್ಕೆ ಮನೆ ಮದ್ದು

ಗುರುವಾರ, 2 ಜುಲೈ 2020 (09:11 IST)
ಬೆಂಗಳೂರು: ವಿಪರೀತ ಟಿವಿ, ಮೊಬೈಲ್ ನೋಡುತ್ತಿದ್ದರೆ, ಬಿಸಿಲಿಗೆ ಮೈ ಒಡ್ಡಿದರೆ, ಮಾನಸಿಕ ಒತ್ತಡ ಇತ್ಯಾದಿಗಳಿಂದ ಕಣ್ಣಿನ ಕೆಳಭಾಗದಲ್ಲಿ ಕಪ್ಪುವರ್ತುಲವುಂಟಾಗುವುದು ಸಾಮಾನ್ಯ. ಇದರಿಂದ ಮಹಿಳೆಯರು ತಮ್ಮ ಚಂದದ ಮೊಗ ಹಾಳಾಯಿತು ಎಂದು ಬೇಸರಪಡುತ್ತಾರೆ. ಇದಕ್ಕೆ ಇಲ್ಲಿದೆ ಒಂದು ಮನೆ ಮದ್ದು.


ಕಪ್ಪು ವರ್ತುಲ ನಿವಾರಣೆಗೆ ಪ್ರತಿನಿತ್ಯ ಆಲೂಗಡ್ಡೆಯ ರಸವನ್ನು ಆ ಭಾಗಕ್ಕೆ ಹಚ್ಚಿಕೊಂಡು ಕೆಲ ಕಾಲ ಹಾಗೆಯೇ ಬಿಟ್ಟು ಶುದ್ಧ ನೀರಿನಲ್ಲಿ ಮುಖ ತೊಳೆಯುತ್ತಿದ್ದರೆ ಉತ್ತಮ. ಇದಲ್ಲದೇ ಹೋದರೆ ಕೊಂಚ ಟೊಮೆಟೋ ರಸ, ನಿಂಬೆ ರಸದ ಜತೆಗೆ ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಆ ಪೇಸ್ಟ್ ನ್ನು ಕಪ್ಪು ವರ್ತುಲ ಇರುವಲ್ಲಿ ಹಚ್ಚಿಕೊಂಡು ಹತ್ತು ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಪರಿಣಾಮಕಾರಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ