ಬೆಂಗಳೂರು: ದೇವರ ಮನೆ ಎಂಬುದನ್ನು ನಾವು ಎಷ್ಟು ಚೆನ್ನಾಗಿ, ಶುದ್ಧವಾಗಿ ಇಟ್ಟುಕೊಳ್ಳುತ್ತೇವೋ, ಅಷ್ಟೇ ಸುಖ ಸಮೃದ್ಧಿ ನಮ್ಮ ಮನೆಯಲ್ಲಿ ನೆಲೆಸಿರುತ್ತದೆ ಎಂಬ ನಂಬಿಕೆಯಿದೆ.
ದೇವರ ಮನೆ ಶುಚಿಯಾಗಿದ್ದಷ್ಟು ಅಲ್ಲಿ ದೇವರ ಸಾನಿಧ್ಯ ಹೆಚ್ಚುವುದಲ್ಲದೆ, ನಮಗೆ, ಮನೆಗೆ ದೇವರ ಆಶೀರ್ವಾದ ಸದಾ ಇರುತ್ತದೆ.
ಆದರೆ ದೇವರ ಮನೆಯಲ್ಲಿ ನಿನ್ನೆ ಇಟ್ಟ ಬಾಡಿದ ಹೂಗಳನ್ನು ಹಾಗೆಯೇ ಬಿಡುವುದು, ಶುದ್ಧ ಬಟ್ಟೆಯಿಂದ ಒರೆಸಿ ಶುಭ್ರವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಷ್ಟೇ ಅಲ್ಲ, ಅಂತಹ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ. ಅಲ್ಲದೆ ಇದು ಮನೆಯಲ್ಲಿ ಋಣಾತ್ಮಕ ವಾತಾವರಣ ಸೃಷ್ಟಿಸುತ್ತದೆ. ಹೀಗಾಗಿ ಪ್ರತಿ ನಿತ್ಯ ದೇವರ ಮನೆಯಲ್ಲಿ ಶುದ್ಧಿಗೊಳಿಸುವುದು ಅಗತ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ