ಕಂಕಣ ಬಲ ಕೂಡಿ ಬರಬೇಕಾದರೆ ಈ ಪೂಜೆ ಮಾಡಿ

ಶನಿವಾರ, 22 ಡಿಸೆಂಬರ್ 2018 (09:16 IST)
ಬೆಂಗಳೂರು: ಯೋಗ್ಯ ವಯಸ್ಸಿನಲ್ಲಿ ಕಂಕಣ ಬಲ ಕೂಡಿ ಬರದೇ ಇದ್ದರೆ ಅದುವೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಶೀಘ್ರವಾಗಿ ವಿವಾಹ ಕೂಡಿ ಬರಬೇಕಾದರೆ ಈ ಪೂಜೆ ಮಾಡುವುದು ಉತ್ತಮ.


ಪಾರ್ವತಿ ಸಮೇತ ಶಿವನ ಆರಾಧನೆ ಮಾಡುವುದರಿಂದ ಬೇಗನೇ ವಿವಾಹವಾಗುತ್ತದೆ. ಶಿವ-ಪಾರ್ವತಿಯರ ಚಿತ್ರದ ಎದುರು ಕಲಶ, ಹೂವು ಹಣ್ಣು, ಫಲ ವಸ್ತುಗಳನ್ನು ಇಟ್ಟು ದೀಪ ಉರಿಸಿ ಅಲಂಕಾರ ಮಾಡಬೇಕು.

ಬಳಿಕ ಗಣೇಶನನ್ನು ಮನಸ್ಸಲ್ಲಿ ಧ್ಯಾನಿಸಿಕೊಂಡು ಶಿವ-ಪಾರ್ವತಿಯರಿಗೆ ಸಂಬಂಧಿಸಿದ ಶ್ಲೋಕ ಅಥವಾ ಮಂತ್ರವನ್ನು 108 ಬಾರಿ ಜಪಿಸಿ ಪೂಜೆ ಮಾಡಿದರೆ ವಿವಾಹ ಭಾಗ್ಯ ಕೂಡಿಬರುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ